ಈ ವರ್ಷ ನಮ್ಮ ದೇಶಕ್ಕೆ ಕೋವಿಡ್ ಅಪ್ಪಳಿಸಿರುವುದರಿಂದ ಜನರು ಮನೆಯಲ್ಲೇ ಇರುವುದು ಸೂಕ್ತ ಎಂದುಕೊಂಡು , ಮನೆಯಿಂದಲೇ ತಮ್ಮ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಶಾಲಾ, ಕಾಲೇಜು ತೆರೆಯದಿರುವ ಕಾರಣ ಮನೆಯಲ್ಲೇ ಕೂತು ಆನ್ಲೈನ್ ಪಾಠ ಕೇಳಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರಿಗೂ ಹೆಡ್ ಫೋನ್ ಅಥವ ಹೆಡ್ ಸೆಟ್ ಗಳು ಅತ್ಯವಶ್ಯವಾಗಿದೆ. ಕಡಿಮೆ ವೆಚ್ಚದಲ್ಲಿ ಸೂಕ್ತ ಹೆಡ್ ಫೋನ್ ಗಳು ಯಾವುದು ಎಂದು ನಾವು ಈ ಲೇಖನೆಯಲ್ಲಿ ತಿಳಿಸುತ್ತೇವೆ.
1. ಬೋಟ್ ಬಾಸ್ ಹೆಡ್ಸ್ 100 ವಯರ್ಡ್ ಇಯರ್ಫೋನ್ – ದರ – ₹349
ಬೋಟ್ ಒಂದು ಭಾರತದ ಕಂಪನಿಯಾಗಿದ್ದು , ಇದರ ದಕ್ಷತೆಯ ಮಟ್ಟ ತುಂಬಾನೇ ಚೆನ್ನಾಗಿದೆ. ಇರುವುದರಲ್ಲಿ ಅತ್ಯಂತ ಕಡಿಮೆ ಬೆಲೆಯ ಇಯರ್ ಫೋನ್ ಇದಾಗಿದೆ. ಈ ಕಂಪನಿಯ ಗುಣಮಟ್ಟದಿಂದ ಸಾಕಷ್ಟು ಜನರ ಮೆಚ್ಚುಗೆ ಪಡೆಯುತ್ತಿದೆ. ಬೋಟ್ ಬಾಸ್ ಹೆಡ್ಸ್ 100 ಹೆಡ್ ಫೋನ್ , ‘ ಇನ್– ಇಯಾರ್ ‘ ಆಗಿದೆ. ಹೆಸರಿನಲ್ಲೇ ‘ಬಾಸ್ ಹೆಡ್‘ ಇರುವುದರಿಂದ ಇದರ ಸೌಂಡ್ ಕ್ವಾಲಿಟಿ ಅತ್ಯುತ್ತಮವಾಗಿರುತ್ತದೆ. ಬೆವರು ನಿರೋಧಕವಾಗಿರುವ ಈ ಬಜೆಟ್ ಇಯರ್ ಫೋನ್ , ಕಪ್ಪು ,ಬಿಳಿ, ಒರಂಜ್ ಬಣ್ಣಗಳಲ್ಲಿ ಲಭ್ಯವಿದೆ. ಇದು ಜಲ ನಿರೋಧಕವಾಗಿರುವುದಿಲ್ಲ.
ವಿಶೇಷತೆಗಳು :
ಬ್ರಾಂಡ್ | ಬೋಟ್ |
ಟೈಪ್ | ಇಯರ್ಫೋನ್ |
ಹೆಡ್ ಫೋನ್ ಟೈಪ್ | ಇನ್– ಇಯರ್ |
ಕನೆಕ್ಟಿವಿಟಿ | ವಯರ್ |
ಇನ್ ಲೈನ್ ರಿಮೋಟ್ | ಇರುತ್ತದೆ |
ಬಣ್ಣ | ಬಿಳಿ , ಕಪ್ಪು , ಒರಂಜ್ |
ಮೈಕ್ರೋಫೋನ್ | ಇರುತ್ತದೆ |
ಜಲ ನಿರೋಧಕ | ಬೆವರು ನಿರೋಧಕ |
ಕನೆಕ್ಟರ್ ಸೈಜ್ | 3.5ಎಂಎಂ |
2. ಸೋನಿ ಎಂಡಿಆರ್- 110 ಎಪಿ – ದರ – ₹ 799
ಭಾರತ ಟೆಕ್ನಾಲಜಿ ಕ್ಷೇತ್ರದಲ್ಲಿ ಸೋನಿ ಎಂಬುದು ಬಹಳ ಹಳೆಯ ಹೆಸರು. ಈ ಕಂಪನಿಯ ಉತ್ಪನ್ನಗಳಲ್ಲಿ ಗುಣಮಟ್ಟಕ್ಕೆ ಯಾವುದೇ ರೀತಿಯ ಮೊಸವಿರುವುದಿಲ್ಲ. ಸೋನಿ ಎಂಡಿಆರ್ – 110 ಎಪಿ ಮೊದಲು ಜನವರಿ 7 2017 ಬಿಡುಗಡೆಯಾಯಿತು. ಹೆಡ್ ಫೋನ್ ವಿಭಾಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಈ ಮಾಡೆಲ್ ಕಿವಿಯ ಮೇಲೆ ಹಾಕಿಕೊಳ್ಳುವುದು ಹಾಗೂ ಮಾಡಚಬಲ್ಲದಾಗಿದೆ. ಇದರ ಆವರ್ತನ 12 ಹರ್ಟ್ಜ್ ಇಂದ 22,000 ಹರ್ಟ್ಜ್ ವರೆಗೂ ಹೋಗುತ್ತದೆ , ಇದರಿಂದ ಕೇಳುವ ಶಬ್ದದ ಗುಣಮಟ್ಟ ಸುಧಾರಿಸುತ್ತದೆ. ಇದು ಬ್ಲೂಟೂತ್ ಕನೆಕ್ಷನ್ ಹೊಂದಿರುವುದಿಲ್ಲ ,ಹಾಗೆಯೇ ವಯರ್ ಮೂಲಕ ಕನೆಕ್ಟ್ ಮಾಡಿ ಕೇಳಬೇಕು.
ವಿಶೇಷತೆಗಳು :
ಭಾರತ ಟೆಕ್ನಾಲಜಿ ಕ್ಷೇತ್ರದಲ್ಲಿ ಸೋನಿ ಎಂಬುದು ಬಹಳ ಹಳೆಯ ಹೆಸರು. ಈ ಕಂಪನಿಯ ಉತ್ಪನ್ನಗಳಲ್ಲಿ ಗುಣಮಟ್ಟಕ್ಕೆ ಯಾವುದೇ ರೀತಿಯ ಮೊಸವಿರುವುದಿಲ್ಲ. ಸೋನಿ ಎಂಡಿಆರ್ – 110 ಎಪಿ ಮೊದಲು ಜನವರಿ 7 2017 ಬಿಡುಗಡೆಯಾಯಿತು. ಹೆಡ್ ಫೋನ್ ವಿಭಾಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಈ ಮಾಡೆಲ್ ಕಿವಿಯ ಮೇಲೆ ಹಾಕಿಕೊಳ್ಳುವುದು ಹಾಗೂ ಮಾಡಚಬಲ್ಲದಾಗಿದೆ. ಇದರ ಆವರ್ತನ 12 ಹರ್ಟ್ಜ್ ಇಂದ 22,000 ಹರ್ಟ್ಜ್ ವರೆಗೂ ಹೋಗುತ್ತದೆ , ಇದರಿಂದ ಕೇಳುವ ಶಬ್ದದ ಗುಣಮಟ್ಟ ಸುಧಾರಿಸುತ್ತದೆ. ಇದು ಬ್ಲೂಟೂತ್ ಕನೆಕ್ಷನ್ ಹೊಂದಿರುವುದಿಲ್ಲ ,ಹಾಗೆಯೇ ವಯರ್ ಮೂಲಕ ಕನೆಕ್ಟ್ ಮಾಡಿ ಕೇಳಬೇಕು.
ಬ್ರಾಂಡ್ | ಸೋನಿ |
ಟೈಪ್ | ಹೆಡ್ ಫೋನ್ |
ಹೆಡ್ ಫೋನ್ ಟೈಪ್ | ಕಿವಿಯ ಮೇಲೆ ಹಾಕುವುದು |
ಕನೆಕ್ಟಿವಿಟಿ | ವಯರ್ |
ಮಡಚಬಲ್ಲದ | ಹೌದು |
ಬಣ್ಣ | ಬಿಳಿ |
ಮೈಕ್ರೋ ಫೋನ್ | ಲಭ್ಯವಿದೆ |
ಜಲ ನಿರೋಧಕ | ಇರುವುದಿಲ್ಲ |
ಆವರ್ತನ ಪ್ರತಿಕ್ರಿಯೆ | 12 ಹರ್ಟ್ಜ್ ನಿಂದ 22,000 ಹರ್ಟ್ಜ್ |
3. ಜೆಬಿಎಲ್ ಸಿ 50 ಹೆಚ್ಐ – ದರ – ₹ 489
ಭಾರತದ ಉನ್ನತ ಹೆಡ್ ಫೋನ್ ಬ್ರಾಂಡ್ ಗಳಲ್ಲಿ ಜೆಬಿಎಲ್ ಕೂಡ ಮೇಲೆ ಕಂಡು ಬರುತ್ತದೆ. ಇದರ ಶಬ್ದ ಕಡಿತಗೊಳಿಸುವ ವೈಶಿಷ್ಟ್ಯ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಡಿಮೆ ದರದಲ್ಲಿ ‘ಇನ್ – ಇಯರ್’ ಹೆಡ್ ಫೋನ್ ದೊರೆಯುತ್ತದೆ. ಈ ಕಂಪನಿಯ ಹೆಡ್ ಫೋನ್ ಗಳು ಬಹಳ ವರ್ಷಗಳು ಬಾಳಿಕೆ ಬಂದಿರುವ ಉದಹರಣೆ ತುಂಬ ಇದೆ. ಸೌಂಡ್ ಇಸೋಲೇಷನ್ ಮಾಡುವ ಈ ಹೆಡ್ ಫೋನ್ 3.5 ಎಂಎಂ ಆಡಿಯೋ ಜಾಕ್ ಹೊಂದಿದೆ. ಕಪ್ಪು , ನೀಲಿ, ಕೆಂಪು ಬಣ್ಣಗಳಲ್ಲಿ ಲಭ್ಯವಿರುವ ಇದು ನೋಡಲು ಆಕರ್ಷಕವಾಗಿದೆ.
ವಿಶೇಷಗಳು
ಬ್ರಾಂಡ್ | ಜೆಬಿಎಲ್ |
ಟೈಪ್ | ಇಯರ್ ಫೋನ್ |
ಹೆಡ್ ಫೋನ್ ಟೈಪ್ | ಇನ್ ಇಯರ್ |
ಕನೆಕ್ಟಿವಿಟಿ | ವಯರ್ |
ಜಲ ನಿರೋಧಕ | ಇರುವುದಿಲ್ಲ |
ಮೈಕ್ರೋ ಫೋನ್ | ಇರುತ್ತದೆ |
ಬಣ್ಣ | ಕಪ್ಪು , ನೀಲಿ, ಕೆಂಪು |
ಶಬ್ದ ನಿರೋಧಕ | ಇರುತ್ತದೆ |
4. ಬೋಟ್ ಬಾಸ್ ಹೆಡ್ಸ್ 220 – ದರ – 499
ಬೋಟ್ ಕಂಪನಿಯ ಹೆಡ್ ಫೋನ್ ಗಳಲ್ಲಿ ಇನ್ನೊಂದು ದಕ್ಷ ‘ ಇನ್ ಇಯರ್ ‘ ಹೆಡ್ ಫೋನ್ ಎಂದರೆ ಅದು ಬೋಟ್ ಬಾಸ್ ಹೆಡ್ 220 ಮಾಡೆಲ್. ಇದರ ಸೌಂಡ್ ಗುಣಮಟ್ಟ ಮೊದಲ ಆವೃತ್ತಿ ಗಿಂತಲೂ ಅಧಿಕವಾಗಿದೆ , ಹಾಗೆಯೇ ಮೈಕ್ರೋಫೋನ್ ಗುಣಮಟ್ಟವೂ ಸುಧಾರಣೆಯಾಗಿದೆ. 3.5ಎಂಎಂ ಆಡಿಯೋ ಜಾಕ್ ಹೊಂದಿರುವ ಈ ಇಯರ್ ಫೋನ್ ಜಲ ನಿರೋಧಕ ಇರುವುದಿಲ್ಲ. ನಿಯಾನ್ ಬಣ್ಣದಲ್ಲಿ ಲಭ್ಯವಿರುವ ಈ ಮಾಡೆಲ್ ಆಕರ್ಷಿಕವಾಗಿದೆ.
ವಿಶೇಷತೆಗಳು
ಬ್ರಾಂಡ್ | ಬೋಟ್ |
ಟೈಪ್ | ಇಯರ್ ಫೋನ್ |
ಹೆಡ್ ಫೋನ್ ಟೈಪ್ | ಇನ್ ಇಯರ್ |
ಕನೆಕ್ಟಿವಿಟಿ | ವಯರ್ |
ಜಲ ನಿರೋಧಕ | ಇರುವುದಿಲ್ಲ |
ಶಬ್ದ ನಿರೋಧಕ | ಇರುತ್ತದೆ |
ಮೈಕ್ರೋಫೋನ್ | ಇರುತ್ತದೆ |
ಬಣ್ಣ | ನಿಯಾನ್ , ಕಪ್ಪು , ಬಿಳಿ |
ಈ ಲೇಖನ ನಿಮಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ! ದಯವಿಟ್ಟು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದಕ್ಕೆ ಸಂಬಂಧಿಸಿದ ಯಾವುದೇ ಸಂದೇಹಗಳನ್ನು ನೀವು ಹೊಂದಿದ್ದರೆ, ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.