ನೀವು ಕಳುಹಿಸುವ ಫೋಟೋ ಅಥವಾ ವಿಡಿಯೋ ಅವರು ಕೇವಲ ಒಂದು ಬಾರಿ ನೋಡಿದರೆ ಸಾಕು, ಅದನ್ನ ಅವರು ಫೋನ್ ನಲ್ಲಿ ಉಳಿಸಿಕೊಳ್ಳಬರದು ಅಂತ ಎಷ್ಟೋ ಸಲ ಅನ್ನಿಸಿದೆ ಅಲ್ವಾ? ಇದಕ್ಕೆ ಅಂತನೇ ವಾಟ್ಸಪ್ಪ್ ಹೊಸ ವೈಶಿಷ್ಟ್ಯ (feature) ಬಿಡುಗಡೆ ಮಾಡಿದೆ.
ಆ ಹೊಸ ವೈಶಿಷ್ಟ್ಯದ ಹೆಸರು ‘ಏಕ ವೀಕ್ಷಣೆ’ (view once). ಇನ್ಸ್ಟಾಗ್ರಾಮ್ ಹಾಗೂ ಸ್ನಾಪ್ ಚಾಟ್ ಮಾದರಿಯಲ್ಲಿ ವಾಟ್ಸಪ್ಪ್ ಕೂಡ ಒಮ್ಮೆ ನೋಡಿದ ಫೋಟೋ ಅಥವಾ ವಿಡಿಯೋ ತಕ್ಷಣ ಮಯವಾಗುವ ವೈಶಿಷ್ಟವನ್ನು ಬಿಡುಗಡೆ ಮಾಡಿದೆ. ಇದರಿಂದ ಸಾಕಷ್ಟು ಜನರು ತಾವು ಕಳುಹಿಸುವ ಫೈಲ್ ಅನ್ನು ಕೇವಲ ಒಂದು ಬಾರಿ ವೀಕ್ಷಣೆಗೆ ಮಾತ್ರ ನಿರ್ಬಂಧಿಸಬಹುದು.
ಏಕ ವೀಕ್ಷಣೆ ವೈಶಿಷ್ಟ್ಯ ಸದ್ಯಕ್ಕೆ ಹೊಸ ಆವೃತ್ತಿ ಬೀಟಾ ವಾಟ್ಸಾಪ್ ಅಲ್ಲಿ ಇದ್ದು, ಒಂದು ವೇಳೆ ಇದು ನಿಮ್ಮ ವಾಟ್ಸಪ್ ನಲ್ಲಿ ಇಲ್ಲ ಎನಿಸಿದರೆ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ.
‘ಏಕ ವೀಕ್ಷಣೆ‘ ವೈಶಿಷ್ಟ್ಯ ಅಂದರೇನು?
ಏಕ ವೀಕ್ಷಣೆ ಅಂದರೆ ವಾಟ್ಸಪ್ ಬಳಕೆದಾರರು ಗೋಪ್ಯವಾಗಿ ಫೋಟೋ ಅಥವಾ ವೀಡಿಯೋವನ್ನು ವಿನಿಮಯ ಮಾಡಿಕೊಳ್ಳಬಹುದು. ನಾವು ‘ಏಕ ವೀಕ್ಷಣೆ’ ಮೂಲಕ ಕಳುಹಿಸಿದ ಫೈಲ್, ಕೇವಲ ಒಂದು ಬಾರಿ ವೀಕ್ಷಣೆ ಮಾಡಲು ಮಾತ್ರ ಅವಕಾಶವಿರುತ್ತದೆ. ಒಮ್ಮೆ ಅವರು ನೋಡಿದ ತಕ್ಷಣ ಅವರ ವಾಟ್ಸಾಪ್ನಲ್ಲಿ ಮಾಯವಾಗುವುದು, ಅವರಿಗೆ ಮತ್ತೊಮ್ಮೆ ವೀಕ್ಷಣೆ ಮಾಡಲು ಅವಕಾಶವಿರುವುದಿಲ್ಲ. ನೆನಪಿರಲಿ, ನೀವ್ ಏನಾದರೂ ಈ ವೈಶಿಷ್ಟ್ಯ ಗೌಪ್ಯತೆಗೆ ಅನುಕೂಲವಾಗಿರುವುದು ಎಂದು ಭಾವಿಸಿದರೆ ಅದು ತಪ್ಪು. ನೀವು ಕಳುಹಿಸಿದ ಫೋಟೋ ಅಥವಾ ವೀಡಿಯೋವನ್ನು ಅವರು ಸ್ಕ್ರೀನ್ ಶಾಟ್ ಅಥವಾ ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳಬಹುದು. ಈ ವೈಶಿಷ್ಟ್ಯದಿಂದ ಗೌಪ್ಯತೆಗೆ ಯಾವುದೇ ರೀತಿ ಸಹಾಯವಾಗುವುದಿಲ್ಲ.
ಏಕ ವೀಕ್ಷಣೆಯ ಫೋಟೋ ಅಥವಾ ವಿಡಿಯೋ ಕಳುಹಿಸುವುದು ಹೇಗೆ?
1. ವಾಟ್ಸಪ್ ನ ಚಾಟ್ ಪುಟದಲ್ಲಿ ಫೋಟೋ ಐಕಾನ್ ಒತ್ತಿ ನೇರವಾಗಿ ಫೈಲ್ ಆಯ್ಕೆ ಮಾಡಬಹುದು ಅಥವಾ ಫೈಲ್ ಐಕಾನ್ ಒತ್ತಿ ಗ್ಯಾಲರಿ ಮೂಲಕ ಇಮೇಜ್ ಅಥವಾ ವಿಡಿಯೋ ಆಯ್ಕೆ ಮಾಡಿ. ನಂತರ ಸ್ಕ್ರೀನ್ ನ ಕೆಳಭಾಗದಲ್ಲಿ ಏಕ ವೀಕ್ಷಣೆ ಐಕಾನ್ ಕಂಡುಬರುವುದು. ಐಕಾನ್ ಒತ್ತಿದ ಕೂಡಲೇ ನೀವು ಆಯ್ಕೆ ಮಾಡಿದ ಫೋಟೋ ಅಥವಾ ವಿಡಿಯೋ ಏಕ ವೀಕ್ಷಣೆಗೆ ಮಾತ್ರ ಎಂದು ಬಿಂಬಿತವಾಗುತ್ತದೆ
2. ಏಕ ವೀಕ್ಷಣೆ ಮೂಲಕ ಕಳುಹಿಸಿದ ಫೋಟೋ ಅಥವಾ ವಿಡಿಯೋ ಚಾಟ್ ಸ್ಕ್ರೀನ್ನಲ್ಲಿ ಕಾಣುವುದಿಲ್ಲ, ಫೋಟೋ ಅಥವಾ ವಿಡಿಯೋ ಎಂದು ಲಿಖಿತವಾಗಿ ತೋರಿಸುವುದು. ಅವರು ಒಮ್ಮೆ ವೀಕ್ಷಿಸಿದ ನಂತರ Opened ಅಥವಾ ತೆರೆದಿರುವುದು ಎಂದು ತೋರಿಸುವುದು.
3. ಒಂದು ವೇಳೆ ನಿಮಗೆ ಯಾರಾದರೂ ಏಕ ವೀಕ್ಷಣೆ ಮೂಲಕ ಕಳುಹಿಸಿದ ಫೋಟೋ ಅಥವಾ ವೀಡಿಯೋವನ್ನು ಉಳಿಸಿಕೊಳ್ಳಲು ಸ್ಕ್ರೀನ್ ರೆಕಾರ್ಡ್ ಅಥವಾ ಸ್ಕ್ರೀನ್ ಶಾಟ್ ಮಾಡಿಕೊಳ್ಳಬಹುದು.
ಇದು ತುಂಬಾ ಉಪಕರಿಯಾಗಿದೆ ಧನ್ಯವಾದಗಳು 🙏