ಓಲಾ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳು ಹಾಗೂ ಬೆಲೆ

ಆನ್ ಲೈನ್ ಕ್ಯಾಬ್ ಸೇವೆ ಒದಗಿಸುವ ಓಲಾದ ಬಹುನಿರೀಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಭಾರತದ 75ನೇ ಸ್ವಾತಂತ್ರ‍್ಯ ದಿನಾಚರಣೆಯಂದು ಓಲಾ ತನ್ನ ಮೊದಲ ಈ-ಸ್ಕೂಟರ್‌ಗಳಾದ S1 ಮತ್ತು S1 Pro ಬಿಡುಗಡೆ ಮಾಡಿದೆ. ಆಕರ್ಷಕ ಬೆಲೆಗಳಲ್ಲಿ ಲಭ್ಯವಿದ್ದು ವಿವಿಧ ರಾಜ್ಯ ಸಬ್ಸಿಡಿ ಹಾಗು FAME ಸಬ್ಸಿಡಿಯಿಂದ ಬೆಲೆ ಇನ್ನೂ ಕಡಿಮೆಯಾಗುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ರಸ್ತೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದೆ. ಅಕ್ಟೋಬರ್ 2121 ರಿಂದ ವಿತರಣೆಗಳು ಪ್ರಾರಂಭವಾಗಲಿವೆ ಎಂದು ಕಂಪನಿ ಹೇಳುತ್ತದೆ.

ಅಂತಹದ್ ಎನ್ ಇದೆ ಮಹಾ?

 

  1. ಓಲಾ ಎಲೆಕ್ಟ್ರಿಕ್ ಸ್ಕೂಟರ್ ನ ಎಲ್ಲಾ ವೈಶಿಷ್ಟ್ಯಗಳನ್ನು ನಿಯಂತ್ರಿಸಬಲ್ಲ ದೊಡ್ಡ 7-ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇಯನ್ನು ಒಳಗೊಂಡಿದೆ.
  2. ನೀವು ಈ ಸ್ಕೂಟರ್ ಅನ್ನು ಹಿಮ್ಮುಖವಾಗಿ ಸಹ ಚಲಾಯಿಸಬಹುದು.
  3. ‘ಕೀ’ ಇಲ್ಲದೆ ಬಳಕೆ ಮಾಡಬಹುದು. (ಆಪ್ ಹಾಗು ಸೆನ್ಸಾರ್ ಸಹಾಯದಿಂದ)
  4. ಓಲಾ ಎಲೆಕ್ಟ್ರಿಕ್ ಸ್ಮಾರ್ಟ್ ಸ್ಕೂಟರ್ ನಲ್ಲಿ ತನ್ನದೇ ಆದ MoveOS ಒಳಗೊಂಡಿದೆ.
  5. ಸ್ಕೂಟರ್ ಇಸಿಮ್ ಅನ್ನು ಹೊಂದಿದೆ, ಇದು ಸ್ಕೂಟರ್ ಅನ್ನು ಇಂಟರ್ನೆಟ್ ಮತ್ತು ಮೊಬೈಲ್ ನೆಟ್ ವರ್ಕ್ ಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.
  6. ವೆಹಿಕಲ್ ಕಂಟ್ರೋಲ್ ಯುನಿಟ್ (VCU), ಆಕ್ಟಾ-ಕೋರ್ ಪ್ರೊಸೆಸರ್, 3GB RAM ಮತ್ತು 4G, Wi-Fi ಮತ್ತು ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ.
  7. ಎಂಜಿನ್ ನ ಶಬ್ದವನ್ನು ನಿಮಗೆ ಇಷ್ಟಬಂದಂತೆ ಇರಿಸಿಕೊಳ್ಳಬಹುದು.
  8. 36-ಲೀಟರ್ ಅಂಡರ್-ಸೀಟ್ ಸ್ಟೋರೇಜ್.
  9. 100% ಚಾರ್ಜ್ಅಲ್ಲಿ ಸರಿಸುಮಾರು 181 Km ಚಲಿಸಬಹುದು.
  10. ಕೇವಲ 18 ನಿಮಿಷಗಳಲ್ಲಿ ಶೇಕಡಾ 50% ವರೆಗೂ ಚಾರ್ಜ್ ಆಗುತ್ತದೆ (50% ಚಾರ್ಜ್ ಅಲ್ಲಿ ಸರಿಸುಮಾರು 75 Km ಚಲಿಸಬಹುದು).
  11. ಚಾರ್ಜ್ ಸ್ಟೇಷನ್‌ಗಳು ಒಟ್ಟು 400 ಊರುಗಳಲ್ಲಿ ಇದ್ದು 1 ಲಕ್ಷಕ್ಕಿಂತ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳಿವೆ.
  12. MoveOS ನಲ್ಲಿ ಬದಲಾಯಿಸಬಲ್ಲ ಥೀಮ್ ಹಾಗು ಸೆಟ್ಟಿಂಗ್ಸ್.
  13. ಧ್ವನಿ ನಿಯಂತ್ರಣ (ವಾಯ್ಸ್ ಕಂಟ್ರೋಲ್), ನಿಮ್ಮ ಸ್ಕೂಟರ್ ಹೇಗೆ ಧ್ವನಿಸುತ್ತದೆ ಎಂಬುದನ್ನು ನೀವು ಟ್ವೀಕ್ ಮಾಡಬಹುದು ಅಥವಾ ಅದನ್ನು ಮೌನವಾಗಿಡಬಹುದು
  14. ಕರೆಗಳು ಮತ್ತು ಸಂಗೀತಕ್ಕಾಗಿ ಅಂತರ್ನಿರ್ಮಿತ (Inbuilt) ಸ್ಪೀಕರ್‌ಗಳು.
  15. ಬ್ಯಾಟರಿ ನಿರ್ವಹಣೆ
  16. ಇತರ ವೈಶಿಷ್ಟ್ಯಗಳಲ್ಲಿ ಪ್ರಾಕ್ಸಿಮಿಟಿ ಲಾಕ್/ಅನ್‌ಲಾಕ್, ರಿಮೋಟ್ ಬೂಟ್ ಲಾಕ್/ಅನ್‌ಲಾಕ್, ಆನ್‌ಬೋರ್ಡ್ ನ್ಯಾವಿಗೇಷನ್, ಜಿಯೋ-ಫೆನ್ಸಿಂಗ್, ಮೊಬೈಲ್ ಫೋನ್ ಕರೆ – ಸಂದೇಶ ಎಚ್ಚರಿಕೆಗಳು ಮತ್ತು ಕಳ್ಳತನ ವಿರೋಧಿ ಅಲಾರ್ಮ್ ವ್ಯವಸ್ಥೆ ಸೇರಿವೆ.

Ola S1

Ola S1 Pro

Max speed 90 KMPH 115 KMPH
0-40 km/h 3.6 s 3 s
Range 121 KM 181 KM
Modes Normal, Sports Normal, Sports, Hyper
Peak motor power 8.5 kW 8.5 kW
Colors 5 Colors 10 Colors
Related:   RAM EXPANSION ಎಂದರೇನು? ಇದರ ಬಳಕೆ ಹೇಗೆ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟು?

ವಿವಿಧ ರಾಜ್ಯ ಸಬ್ಸಿಡಿ ಹಾಗು FAME ಸಬ್ಸಿಡಿಯಿಂದ ಬೆಲೆ ಇನ್ನೂ ಕಡಿಮೆಯಾಗುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ರಸ್ತೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದೆ.

Ola S1

Ola S1 Pro

Delhi ₹85,099 ₹1,10,149
Gujarat ₹79,999 ₹1,09,999
Maharashtra ₹94,999 ₹1,24,999
Rajasthan ₹89,968 ₹1,19,138
All other states ₹99,999 ₹1,29,999

ಯಾವಾಗ ಲಭ್ಯ ?

ಸ್ಕೂಟರ್ ಅನ್ನು ಮೊದಲೇ ಕಾಯ್ದಿರಿಸಿದ ಗ್ರಾಹಕರು ಸೆಪ್ಟೆಂಬರ್ 8 ರಿಂದ ಖರೀದಿಸಬಹುದು.  ಸ್ಕೂಟರ್‌ನ ವಿತರಣೆ ಅಕ್ಟೋಬರ್ ನಿಂದ 1000 ನಗರಗಳಲ್ಲಿ ಆರಂಭವಾಗಲಿವೆ. ಓಲಾ ಎಲೆಕ್ಟ್ರಿಕ್ ಯಾವುದೇ ಡೀಲರ್‌ಶಿಪ್ ಇಲ್ಲದೆ ಮಾರಾಟ ಮಾಡಲಿದೆ. ಕಾರ್ಖಾನೆಯಿಂದಲೇ ನೇರವಾಗಿ ಸ್ಕೂಟರ್‌ಗಳನ್ನು ಗ್ರಾಹಕರ ಮನೆಗೆ ಡೆಲಿವರಿ ಮಾಡುತ್ತಾರೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಓಲಾ ಫ್ಯೂಚರ್ ಗಿಗಾಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ, ಇದು ವರ್ಷಕ್ಕೆ 10 ಮಿಲಿಯನ್ (1 Crore) ಸ್ಕೂಟರ್‌ಗಳನ್ನು ತಯಾರಿಸುವ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಕಾರ್ಖಾನೆಯಾಗಲಿದೆ. ಇದು ಭಾರತದ ಅತಿದೊಡ್ಡ ಕಟ್ಟಡವಾಗಲಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಆಲೋಚನೆಗಳು ?

ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನವನ್ನು ಓಲಾ ನೀಡಿದೆ.ವೈಶಿಷ್ಟ್ಯಗಳನ್ನು ನೋಡಿದರೆ ಬೆಲೆ ಕೂಡ ಕಮ್ಮಿ ಅನ್ನಿಸುತ್ತದೆ. ಕಂಪನಿಯು ಹೇಳಿದಂತೆ, ಭಾರತದಲ್ಲಿ ವಿದ್ಯುತ್ ಕ್ರಾಂತಿ ಪ್ರಾರಂಭವಾಗುವುದರಲ್ಲಿ ಸಂಶಯವೇನಿಲ್ಲ.

Leave a Reply

Your email address will not be published. Required fields are marked *

error: Content is protected !!