ನಿಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಅಸಿಸ್ಟೆಂಟನ್ನು ಹೇಗೆ ನಿಷ್ಕ್ರಿಯಗೊಳಿಸಬಹುದು?

ಗೂಗಲ್ ಅಸಿಸ್ಟೆಂಟ್ ಎನ್ನುವುದು ಪೂರ್ವನಿಯೋಜಿತವಾಗಿ ಆಂಡ್ರಾಯ್ಡ್ ಸಾಧನಗಳಲ್ಲಿ ಲಭ್ಯವಿರುವ ಎಐ(AI) ಚಾಲಿತ ಅಪ್ಲಿಕೇಷನ್ ಆಗಿದೆ. ಇದು ನಿಮ್ಮ ದೈನಂದಿನ ಜೀವನದಲ್ಲಿ ಸಾಕಷ್ಟು ಕೆಲಸಗಳಿಗೆ ಅನುಕೂಲ ಮಾಡಿಕೊಡುತ್ತದೆ, ಗೂಗಲ್ ಸಂಬಂಧಿತ ಆಟಗಳನ್ನು ಆಡಲು ಮತ್ತು ಧ್ವನಿ ಆಜ್ಞೆಗಳನ್ನು ನಿಯಂತ್ರಿಸಲು ಪ್ರಬಲ ಅಪ್ಲಿಕೇಷನ್.

ಆದರೆ ಕೆಲವೊಮ್ಮೆ ಗೂಗಲ್ ಅಸಿಸ್ಟೆಂಟ್ ಯಾವುದೇ ಆಜ್ಞೆಯಿಲ್ಲದೆ ಸ್ವಯಂಚಾಲಿತವಾಗಿ ಆನ್ ಆಗುತ್ತದೆ, ಇದು ಬಹಳ ಸಲ  ಕಿರಿಕಿರಿ ಉಂಟುಮಾಡತ್ತೆ. ಅದೃಷ್ಟವಶಾತ್ ಈಗ ನಾವು ನಮ್ಮ ಮೊಬೈಲ್ ನಲ್ಲಿ ಗೂಗಲ್ ಅಸಿಸ್ಟೆಂಟನ್ನು ನಿಷ್ಕ್ರಿಯಗೊಳಿಸಬಹುದು.  ಗೂಗಲ್ ಅಸಿಸ್ಟೆಂಟ್ ಸೇವೆಯು Google ಅಪ್ಲಿಕೇಶನ್‌ನ ಭಾಗವಾಗಿರುವುದರಿಂದ ಅದನ್ನು ಅನ್ ಇನ್ಸ್ಟಾಲ್ ಮಾಡಲು  ಸಾಧ್ಯವಿಲ್ಲ. ನಿರಂತರ ಅಡಚಣೆಗಳು ಬಳಕೆದಾರರ ಗೌಪ್ಯತೆಗೆ ತೊಂದರೆಯಾಗುತ್ತಿದೆ ಏಕೆಂದರೆ ಹಿನ್ನೆಲೆಯಲ್ಲಿ (background ಅಲ್ಲಿ) ಗೂಗಲ್ ಅಸಿಸ್ಟೆಂಟ್ ನಿರಂತರವಾಗಿ ರನ್ ಆಗಿರುತ್ತಿರುತ್ತದೆ ಮತ್ತು ಇದೇ ವಿಚಾರವಾಗಿ ಗೂಗಲ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ನಿರಂತರ ಅಡಚಣೆಗಳನ್ನು ನಿವಾರಿಸಲು Ok ಗೂಗಲ್/Hey ಗೂಗಲ್ ಆಜ್ಞೆಗಳನ್ನು ಆಫ್ ಮಾಡಬಹುದು, ಹೋಮ್ ಬಟನ್‌ನಲ್ಲಿ ಕೂಡ ಗೂಗಲ್ ಅಸಿಸ್ಟ್ ಅನ್ನು ಆಫ್ ಮಾಡಬಹುದು, ಆಗ ಸ್ವಯಂಚಾಲಿತವಾಗಿ ಗೂಗಲ್ ಅಸಿಸ್ಟೆಂಟ್ ಆನ್ ಆಗುವುದಿಲ್ಲ.

ನಿಮಗೆ ಗೂಗಲ್ ಅಸಿಸ್ಟೆಂಟ್ ಇಷ್ಟವಾಗದಿದ್ದರೆ, ನಿಮ್ಮ ಆಂಡ್ರಾಯ್ಡ್ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:-

  1. ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್ ಆಯ್ಕೆಗೆ ಹೋಗಿ ಮತ್ತು ಗೂಗಲ್(Google) ಆಯ್ಕೆಯನ್ನು ಒತ್ತಿ.
  1. Settings for Google apps” ತೆರೆಯಿರಿ.
  1. Search, assistant & Voice“ನ್ನು ಒತ್ತಿ ಮತ್ತು “Google assistant“ನ್ನು ಆಯ್ಕೆಮಾಡಿ.

  1. Google ಸಹಾಯಕ ಅಡಿಯಲ್ಲಿ, ಸಾಮಾನ್ಯ(General) ಆಯ್ಕೆಯನ್ನು ಪರಿಶೀಲಿಸಿ ಮತ್ತು ಆಯ್ಕೆ ಮಾಡಿ.
  1. Google ಸಹಾಯಕವನ್ನು ಆಫ್ ಮಾಡಿ/ನಿಷ್ಕ್ರಿಯಗೊಳಿಸಿ.

ನೀವು ಈ ಲೇಖನವನ್ನು ಇಷ್ಟಪಡುತ್ತೀರಿ ಎಂದು ನಾನು ಭಾವಿಸುತ್ತೇನೆ, ಹಾಗಿದ್ದರೆ ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಅಥವಾ ಪ್ರೀತಿಪಾತ್ರರಿಗೆ  ತಪ್ಪದೆ ಹಂಚಿಕೊಳ್ಳಿ. ಇದಕ್ಕೆ ಸಂಬಂಧಪಟ್ಟಂತೆ ನಿಮಗೆ ಯಾವುದೇ ಅನುಮಾನವಿದ್ದರೆ, ದಯವಿಟ್ಟು ನೀವು ಈ ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.

Related:   ವಿಂಡೋಸ್ ನಲ್ಲಿ  ನಿಮ್ಮ ಕಂಪ್ಯೂಟರ್ ಮದರ್ ಬೋರ್ಡ್ ಮಾದರಿಯನ್ನು ಪರಿಶೀಲಿಸುವುದು ಹೇಗೆ?

One thought on “ನಿಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಅಸಿಸ್ಟೆಂಟನ್ನು ಹೇಗೆ ನಿಷ್ಕ್ರಿಯಗೊಳಿಸಬಹುದು?

Leave a Reply

Your email address will not be published. Required fields are marked *

error: Content is protected !!