ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿಯಲ್ಲಿ ಹಲವಾರು ಅನ್ವೇಷಣೆಗlಳು, ಸ್ಮಾರ್ಟ್ ಫೋನ್ ಹಾಗೂ ಇನ್ನಿತರ ಹಲವಾರು ಸಾಧನಗಳಲ್ಲಿ ಹೊಸಬಗೆಯ ಫೀಚರ್ ಗಳನ್ನು ನೋಡುತ್ತಾ ಹೋಗುತ್ತಿದ್ದೇವೆ. ಹಾಗಾದರೆ ರಿಫ್ರೆಶ್ ರೇಟ್ ಎಂದರೇನು ಹಾಗೂ ರಿಫ್ರೆಶ್ ರೇಟ್ ಹೊಂದಿದ ಮೊಬೈಲ್ ಗಳಿಗೆ ಪ್ರಾಮುಖ್ಯತೆ ಕೊಡುವುದು ಯಾಕೆ ಎಂದು ತಿಳಿದುಕೊಳ್ಳೋಣ.
ರಿಫ್ರೇಶ್ ರೇಟ್ ಎಂದರೇನು?
ಒಂದು ಡಿಸ್ಪ್ಲೇಯಲ್ಲಿ ಹರ್ಟ್ಸ್ ಎನ್ನುವುದು ಬಹಳ ಮುಖ್ಯ ಹರ್ಟ್ಸ್ ಎಂದರೆ ಡಿಸ್ಪ್ಲೇಯಲ್ಲಿ ನಡೆಯುವ ಬದಲಾವಣೆ ಎಂದರೆ ಡಿಸ್ಪ್ಲೇ ಯೊಳಗೆ ನಾವು ನೋಡುವ ಚಿತ್ರಣ ಒಂದಾದಮೇಲೊಂದರಂತೆ ಬದಲಾಗುವಾಗ ತೆಗೆದುಕೊಳ್ಳುವ ವೇಗವನ್ನು ‘ರಿಫ್ರೇಶ್ ರೇಟ್’ ಎನ್ನುತ್ತಾರೆ, ಇದನ್ನ Hertz ಲೆಕ್ಕದಲ್ಲಿ ಹೇಳಲಾಗುತ್ತದೆ. ಸಾಮಾನ್ಯವಾಗಿ ನಾವು ನೋಡುವ ವಿಡಿಯೋಗಳಲ್ಲಿ 24 ಹರ್ಟ್ಸ್ ರಿಫ್ರೆಶ್ ರೇಟ್ ಹೊಂದಿರುತ್ತದೆ. ಒಂದುವೇಳೆ ರಿಫ್ರೆಶ್ ರೇಟ್ ತುಂಬಾ ಜಾಸ್ತಿಯಾದಾಗ ನೋಡುವ ಕಂಟೆಂಟ್ ತುಂಬಾ ಸ್ಪಷ್ಟವಾಗಿ ಕಾಣುತ್ತದೆ. ಕೆಲ ವಿಡಿಯೋಗಳು 60fps ಮೋಡ್ ಅಲ್ಲಿ ಚಿತ್ರೀಕರಿಸಲ್ಪಟ್ಟಿರುತ್ತದೆ ಅದು ನಾವು 60 fps ಸಪೋರ್ಟ್ ಮಾಡುವ ಸ್ಕ್ರೀನ್ ಅಲ್ಲಿ ನೋಡಿದಾಗ ಅದರ ಸ್ಪಷ್ಟತೆ ಹಾಗೂ ಅದರ ನೈಜಯತೆ ತುಂಬಾ ಚನ್ನಾಗಿ ಕಾಣುತ್ತದೆ, ಜಾಸ್ತಿ ಹರ್ಟ್ಸ್ ಇರೋ ಡಿಸ್ಪ್ಲೇ ಗಳು ವಿಡಿಯೋ ಗೇಮ್ ಆಡುವುದಕ್ಕೆ ಒಳ್ಳೆಯ ಅನುಭವ ಕೊಡುತ್ತದೆ ಹಾಗೂ HD ವಿಡಿಯೋಗಳು.
FPS ಎಂದರೇನು?
Fps ಎಂದರೆ ಫ್ರೇಮ್ ಪರ್ ಸೆಕೆಂಡ್ ಎಂಬರ್ಥ. ನಾವು ನೋಡೋ ವಿಡಿಯೋ ಅಥವಾ ಯಾವುದೇ ತರಹದ ಕಂಟೆಂಟ್ ನ ಫ್ರೇಮ್ ನಂತರೆ ಮತ್ತೊಂದು ಫ್ರೇಮ್ ಬರಲು ಕೆಲ ಸಮಯ ಹಿಡಿಯುತ್ತದೆ ಇದನ್ನ fps ಅನ್ನಲಾಗುತ್ತದೆ, ಈ ಸಮಯವು ಮಿಲಿ ಸೆಕೆಂಡ್ಸ್ ನಲ್ಲಿ ಇರುತ್ತದೆ.
60 ಎಫ್ ಪಿ ಎಸ್ ಎಂದರೆ ಒಂದು ಸೆಕೆಂಡ್, ಅಂದರೆ ವಿಡಿಯೋ ದಲ್ಲಿ ಒಂದು ಸೆಕಂಡ್ ಗೆ 60 ಚಿಕ್ಕ-ಚಿಕ್ಕ ಫ್ರೇಮ್ ಗಳು ಇವೆ ಎಂಬರ್ಥ.
ಇತ್ತೀಚಿನ ದಿನಗಳಲ್ಲಿ 90 FPS ಹಾಗೂ 120 FPS ಹೊಂದಿದ ಮೊಬೈಲ್ ಗಳನ್ನು ನೋಡಬಹುದು 120 FPS ನಲ್ಲಿ ಚಿತ್ರೀಕರಿಸಿದ ವಿಡಿಯೋ ಅಥವಾ ಗೇಮ್ ಅನ್ನು ನೋಡಿದಾಗ ಅದರ ಸ್ಪಷ್ಟತೆ ಹೆಚ್ಚಾಗಿ ಕಾಣುತ್ತದೆ. ಹಲವಾರು ಟಿವಿ ಉತ್ಪಾದನಾ ಸಂಸ್ಥೆ ಕೂಡ 120 FPS ಹೊಂದಿದ ಟಿವಿ ಗಳನ್ನು ಬಿಡುಗಡೆ ಮಾಡುತ್ತಿವೆ ಮುಂದಿನ ದಿನಗಳಲ್ಲಿ ಅತಿ ಹೆಚ್ಚು FPS ಹೊಂದಿದ ಕಂಟೆಂಟ್ ಅನ್ನು ನಾವು ಟಿವಿಯಲ್ಲಿ ಸಹ ವೀಕ್ಷಿಸಬಹುದು.