ಇನ್‌ಸ್ಟಾಗ್ರಾಮ್ ನಲ್ಲಿ ಮರೆಯಾಗುವ ಫೋಟೋ / ವಿಡಿಯೋಗಳನ್ನು ಕಳುಹಿಸುವುದು ಹೇಗೆ?

ಇನ್‌ಸ್ಟಾಗ್ರಾಮ್ ಫೇಸ್‌ಬುಕ್ ಒಡೆತನದ ಉಚಿತ ಫೋಟೋ ಮತ್ತು ವೀಡಿಯೊ ಹಂಚಿಕೆ ಅಪ್ಲಿಕೇಶನ್ ಆಗಿದೆ. ಸಕ್ರಿಯವಾಗಿ 1 ಬಿಲಿಯನ್ ಗಿಂತಲೂ ಅಧಿಕ ಬಳಕೆದಾರರಿದ್ದಾರೆ. ಈ ಆಪ್ ನಲ್ಲಿ ಫೋಟೋ , ವೀಡಿಯೊ ಹಂಚಿಕೆ ಹಾಗೂ ಚಾಟ್ ಮಾಡಬಹುದು. ಇದರ ಹೊರತಾಗಿ, ಒಂದು ನಿಮಿಷಕಿಂತ ಹೆಚ್ಚು ಸಮಯವಿರುವ ವಿಡಿಯೋವನ್ನು ಐಜಿಟಿವಿಯಲ್ಲಿ , ಸಣ್ಣ ವಿಡಿಯೋಗಳನ್ನು ಸ್ಟೋರೀಸ್ ಮತ್ತು ರೀಲ್ಸ್ ಗಳಲ್ಲಿ ನೋಡಬಹುದು.

ಇನ್‌ಸ್ಟಾಗ್ರಾಮ್ 2020ರಲ್ಲಿ ಹೊಸ ವೈಶಿಷ್ಟ್ವನ್ನು ತಮ್ಮ ಬಳಕೆದಾರರಿಗೆ  ಪರಿಚಯಿಸಿತು, ಅದುವೇ ಮರೆಯಾಗುವ ಫೋಟೋಗಳು ಹಾಗೂ ವೀಡಿಯೊಗಳನ್ನು ಗುಂಪು ಅಥವಾ ಪ್ರತ್ಯೇಕ ಚಾಟ್‌ಗಳಿಗೆ ಕಳುಹಿಸಬಹುದ ವೈಶಿಷ್ಟ್ಯ.  ಮರೆಯಾಗುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು ಈ ಮೊದಲು ಸ್ನಾಪ್ ಚಾಟ್ ಮತ್ತು ಇತರ ಅನೇಕ ಸಾಮಾಜಿಕ ಮೆಸೇಜಿಂಗ್ ಆ್ಯಪ್ ಗಳಲ್ಲಿ ಕಾಣೆಯಾದ ಸಂದೇಶಗಳಂತೆ ನಾವು ನೋಡಿದ್ದೇವೆ.

ಮರೆಯಾಗುತ್ತಿರುವ ಫೋಟೋ / ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕಳುಹಿಸುವುದು ಹೇಗೆ?

ಗಮನಿಸಿ: ನೀವು ಮರೆಯಾಗುತ್ತಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌  ವೆಬ್ ಮೂಲಕ ಕಳುಹಿಸಲು ಸಾಧ್ಯವಿಲ್ಲ.  ಈ ವೈಶಿಷ್ಟ್ಯವನ್ನು ಬಳಸಲು ನೀವು ಮೊಬೈಲ್ ಅಪಲಿಕೇಶನ್ಅನ್ನು ಬಳಸಬೇಕಾಗುತ್ತದೆ.

1. ಮೊದಲನೆಯದಾಗಿ, ನಿಮ್ಮ ಮೊಬೈಲ್ನಲ್ಲಿ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ.  ಇಲ್ಲಿ ನಾವು ಆಂಡ್ರಾಯ್ಡ್ ಫೋನ್ಅನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದೇವೆ. ಮುಂದೆ, ಪರದೆಯ ಮೇಲಿನ ಬಲಭಾಗದಲ್ಲಿರುವ ಸಂದೇಶ ಐಕಾನ್ ಕ್ಲಿಕ್ ಮಾಡಿ.

2. ಈಗ ಸಂಪರ್ಕ ಹೆಸರಿನ ಹಿಂದೆ ಇರಿಸಲಾಗಿರುವ ‘ಕ್ಯಾಮೆರಾ’ ಐಕಾನ್ ಅನ್ನು ಟ್ಯಾಪ್ ಮಾಡಿ. ಈಗ ನೀವು ಕಳುಹಿಸಲು ಬಯಸುವ ಫೋಟೋವನ್ನು ಆಯ್ಕೆ ಮಾಡಿ.

3. ನಂತರ, ಕೆಳಗೆ ತೋರಿಸಿರುವಂತೆ ಪರದೆಯ ಕೆಳಭಾಗದಲ್ಲಿರುವ ‘ಒಮ್ಮೆ ವೀಕ್ಷಿಸಿ’ ಆಯ್ಕೆಯನ್ನು ಆರಿಸಿ. ಮುಗಿದ ನಂತರ, ಕೆಳಗೆ ತೋರಿಸಿರುವಂತೆ “ಸೆಂಡ್” ಬಟನ್ ಟ್ಯಾಪ್ ಮಾಡಿ.

4. ಫೋಟೋ / ವೀಡಿಯೊಗಳನ್ನು ರಿಪ್ಲೇ ಮಾಡಲು ನೀವು ಇತರರಿಗೆ ಅವಕಾಶ ನೀಡಲು ಬಯಸಿದರೆ, ‘ಅಲೋ ರಿಪ್ಲೇ’ ಆಯ್ಕೆಯನ್ನು ಆರಿಸಿ, ನೀವು ಕಳುಹಿಸಿದ ಫೋಟೋ/ವಿಡಿಯೋ ಚಾಟ್ ನಲ್ಲಿ ಇರಲು ಬಸಸಿದರೆ, ‘ಅಲೋ ಇನ್ ಚಾಟ್’ ಆಯ್ಕೆ ಮಾಡಿ ಮತ್ತು ‘ಕಳುಹಿಸು’ ಬಟನ್ ಟ್ಯಾಪ್ ಮಾಡಿ.

5. ಕಣ್ಮರೆಯಾಗುತ್ತಿರುವ ಫೋಟೋ / ವಿಡಿಯೋ ಚಾಟ್‌ಬಾಕ್ಸ್‌ನಲ್ಲಿ ಈ ರೀತಿ ಕಾಣಿಸುತ್ತದೆ. ಅವರು ಅದನ್ನು ವೀಕ್ಷಿಸಿದ ನಂತರ ಬಾಂಬ್ ಚಿತ್ರ ಕಂಡುಬರುತ್ತದೆ.

Related:   ಫೇಸ್ ಬುಕ್ ನಲ್ಲಿ ಸ್ನೇಹಿತರ ಸಲಹೆಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ ?

Leave a Reply

Your email address will not be published. Required fields are marked *

error: Content is protected !!