ನಮ್ಮ ಮಾಹಿತಿ ಆಧಾರದ ಮೇಲೆ ಜಾಹಿರಾತುಗಳು ಹೇಗೆ ತೋರಿಸಲಾಗುತ್ತೆ ?

ಯಾವುದೇ ವಿಷಯ ಅಥವ ಉತ್ಪನ್ನಗಳ ಬಗ್ಗೆ ಹುಡುಕಿ, ಅದರ ಬಗ್ಗೆ ಚರ್ಚಿಸಿ, ಕೆಲವೇ ಹೊತ್ತಿನಲ್ಲಿ ಗೂಗಲ್ ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ನಿಮಗೆ ಅದರ ಬಗ್ಗೆ  ಜಾಹಿರಾತು ತೋರಿಸಿಬಿಡುತ್ತೆ. ಅದೆಷ್ಟೋ ಬಾರಿ ನಾವು ಇದರ ಬಗ್ಗೆ ತಲೆ ಕೇಡಿಸಿಕೊಳಲ್ಲ, ಆದರೆ ನಮ್ಮ ಮಾಹಿತಿ ಅವರಿಗೆ ಸಿಕ್ತು ಅಂತ ಒಂದ್ ಅನುಮಾನ ಇದ್ದೇ ಇರುತ್ತೆ. ಈ ಲೇಖನ ದಲ್ಲಿ ಇಂಟರ್ನೆಟ್ ನಲ್ಲಿ ಯಾವ ಮಾಹಿತಿ ಆಧಾರದ ಮೇಲೆ ನಿಮಗೆ ಜಾಹೀರಾತು ತೋರಿಸಲಾಗುತ್ತೆ ಅಂತ ವಿವರಿಸಲಾಗಿದೆ. 

ನಾವು ಹುಡುಕಿದ ಅಥವಾ ಚರ್ಚಿಸಿದ ವಿಷಯದ ಮಾಹಿತಿ ಅವ್ರಿಗೆ ಹೇಗೆ ಸಿಕ್ತು?

ನೀವು ಫ್ಲಿಪ್ ಕಾರ್ಟ್ ಅಮೆಜಾನ್ ನಂತಹ ಈ-ಕಾಮರ್ಸ್ ವೇದಿಕೆಯಲ್ಲಿ ಹುಡುಕಿದ ಹಾಗು ವೀಕ್ಷಿಸಿದ ಉತ್ಪನ್ನಗಳು, ಇವುಗಳ ಮಾಹಿತಿ ಸಂಗ್ರಹ (ಅದಕ್ಕೆ ಕ್ಯಾಶೆ ಹಾಗು ಕುಕೀಸ್ ಎನ್ನುತ್ತಾರೆ) ನಿಮ್ಮ ಮೊಬೈಲ್ ಅಥವಾ ವೆಬ್ ಬ್ರೌಸರ್ ಅಲ್ಲಿ ಉಳಿಸಿರುತ್ತೆ. ಇವಗಳ ಆಧಾರದ ಮೇಲೆ ನಿಮಗೆ ಜಾಹಿರಾತುಗಳು ಬರುತ್ತೆ.

ಕ್ಯಾಶೆ ಮತ್ತು ಕುಕೀ ಅಂದರೇನು ?

‘ಕ್ಯಾಶೆ’ ಎಂದರೆ ‘ತಾತ್ಕಾಲಿಕ ಸಂಗ್ರಹಣೆ’. ಅದು ವೆಬ್ ಪುಟಗಳನ್ನು ತ್ವರಿತವಾಗಿ ಲೋಡ್ ಮಾಡಲು ಬಳಕೆದಾರರ ಕಂಪ್ಯೂಟರ್‌ನಲ್ಲಿ ಅಥವಾ ಮೊಬೈಲ್ ಬ್ರೌಸರ್ ಗಳಲ್ಲಿ ವೆಬ್ ಪುಟದ ‘ಆಫ್ ಲೈನ್’ ಡೇಟಾವನ್ನು ಸಂಗ್ರಹಿಸುತ್ತದೆ.

‘ಕೂಕೀ’ಗಳು ನೀವು ಭೇಟಿ ನೀಡುವ ಸೈಟ್‌ಗಳಿಂದ ರಚಿಸಲಾದ ಬ್ರೌಸಿಂಗ್ ಡೇಟಾ ಫೈಲ್‌ಗಳು. ಬ್ರೌಸಿಂಗ್ ಡೇಟಾವನ್ನು ಎಂದರೆ ನೀವು ವೆಬ್ಸೈಟ್ ನಲ್ಲಿ ವೀಕ್ಷಿಸಿದ ಪುಟಗಳು, ಉತ್ಪ್ನನ್ನ ಗಳು, ಹುಡುಕಿದ ಪದಾರ್ಥಗಳು, ಕಾರ್ಟ್ ಗೆ ಸೇರಿಸಿದ ಪದಾರ್ಥಗಳು. ವೆಬ್ಸೈಟ್ ಗಳು ಉಳಿಸಲ್ಪಟ್ಟ ಕೂಕೀ ಗಳ ಆಧಾರದ ಮೇಲೆ ನಿಮಗೆ ಜಾಹಿರಾತು ಗಳನ್ನು ತೋರಿಸಲಾಗುತ್ತದೆ

ನಾವು ಮಾತಿನಲ್ಲಿ ಚರ್ಚೆ ಮಾಡಿದ ವಿಷಯದ ಬಗ್ಗೆನೂ ಜಾಹಿರಾತು ಬರುತ್ತೆ, ಅದು ಹೇಗೆ?

ಇದು ಅನುಮಾನ ಎಲ್ಲರಿಗೂ ಸಹಜ. ಹಲವು ಬಾರಿ ನಾವು ಬಾಯಲ್ಲಿ ಚರ್ಚಿಸಿದ ವಿಷಯ ಅಥವಾ ನಮ್ಮ ಬಾಯಲ್ಲಿ ಬಂದ ಉತ್ಪನ್ನಗಳ ಬಗ್ಗೆ ಹಲವಾರು ಬಾರಿ ಜಾಹಿರತು ಬಂದಿವೆ. ಇದು ಈವರೆಗೂ ಎಲ್ಲಿಯೂ ಸಾಬೀತು ಆಗಿಲ್ಲ, ಆದರೂ ನಮ್ಮೆಲ್ಲರಿಗೂ ಆದ ಅನುಭವ. ನಮ್ಮ ಅನುಮಾನ ಏನೆಂದರೆ, ನಾವು ಸ್ಮಾರ್ಟ್ ಫೋನ್ ಅಲ್ಲಿ ಬಳಸುವ ಅತೀ ಹೆಚ್ಚು ಆಪ್ಲಿಕೇಷನ್ ಗಳು ಗೂಗಲ್ ಹಾಗು ಫೆಸ್ಬುಕ್ ಗೆ ಸಿರಿದ್ದು. ಗೂಗಲ್ ನ ಆಂಡ್ರಾಯ್ಡ್, ಜಿಮೇಲ್, ಮ್ಯಾಪ್ ಇತ್ಯಾದಿ.. ಹಾಗು ಫೇಸ್ಬುಕ್ ನ ವಾಟ್ಸಪ್ಪ್, ಮೆಸೆಂಜರ್, ಇನ್ಸ್ ಸ್ಟಾಗ್ರಾಮ್ ಗಳು. ಗೂಗಲ್ ಹಾಗು ಫೆಸ್ಬುಕ್ ಗೆ ಸಿರಿದ್ದ ಯಾವದೇ ಅಪ್ಲಿಕೇಶನ್ಅಲ್ಲಿ ನೀವು Microphone ಅನುಮತಿ (permission) ಕೊಟ್ಟಿದ್ದರೆ, ಅವಗಳು ನಿಮ್ಮ ಮಾತುಗಳನ್ನು ಆಲಿಸೋ ಸಾಧ್ಯತೆ ಇದೆ. ಅದರಲ್ಲಿ ನೀವು ಉಚ್ಚರಿಸುವ ಕೆಲವು ಪದಗಳಲ್ಲಿ ಗೂಗಲ್ ಹಾಗು ಫೆಸ್ಬುಕ್ ಬಳಿ ಜಾಹಿರಾತುಗಳಿದ್ದರೆ ನಿಮಗೆ ತೋರಿಸುತ್ತೆ.  ಇದನ್ನು ಸಾಕ್ಷ್ಯಗಳಿಂದ ಸಾಬೀತು ಓಡಿಸಲು ಸಾಧ್ಯವಿಲ್ಲ ಆದರೆ ಇದು ನಮ್ಮ ಅನುಮಾನಗಳಿಗೆ ಉತ್ತರ ಸಿಗವ ಒಂದು ಥಿಯರಿ (theory).

Related:   ಗೂಗಲ್ ಖಾತೆಯಲ್ಲಿ ಸ್ಟೋರೇಜ್ ಉಳಿಸುವ ಸುಲಭ ಮಾರ್ಗ

ವಾಟ್ಸಪ್ಪ್ ನಲ್ಲಿ ಚಾಟ್ ಮಾಡಿದ ಸಂಭಾಷಣೆಗಳ ಬಗ್ಗೆಯೂ ಜಾಹಿರಾತು ಬರುತ್ತೆ, ಅದು ಹೇಗೆ?

ಹೌದು, ವಾಟ್ಸಪ್ಪ್ ಒಡೆತನ  ಫೇಸ್ಬುಕ್ ಆಗಿದ್ದು, ಅವರು ವಾಟ್ಸಪ್ಪ್ ಚಾಟ್ ಎನ್ ಕ್ರಿಪ್ಟೆಡ್ ಅಂತ ಎಷ್ಟೇ ಬೊಬ್ಬೆ ಹೊಡೆದರು ಅದು ಶುದ್ಧ ಸುಳ್ಳು. ಹಲವು ಭಾರಿ ನಮ್ಮ ಚಾಟ್ ಸಂಭಾಷಣೆ ಮೇಲೆ ಜಾಹಿರಾತು ಬಂದಿರುವುದು ಸಾಬೀತು ಆಗಿದೆ. ಅದೆಷ್ಟೋ ಸಲ ನಾವು ವಾಟ್ಸಪ್ಪ್ ನಲ್ಲಿ ಮಾಡುವ ಚಾಟ್ ಸಂಭಾಷಣೆಗಳ ಆಧಾರದ ಮೇಲೆ ಫೇಸ್ಬುಕ್ ಇನ್ಸ್ ಸ್ಟಾಗ್ರಾಮ್ ಗಳಲ್ಲಿ ಕೆಲವೇ ಹೊತ್ತಲ್ಲೇ ಜಾಹೀರಾತು ಬಂದಿರುತ್ತೆ. 

ನಮ್ಮ ಗೌಪ್ಯತೆಗೆ ಬೆಲೆನೇ ಇಲ್ವಾ ಹಾಗಾದ್ರೆ? ಇದಕ್ಕೆ ಉಪಾಯ ಏನು ?

ಇಂಟರ್ನೆಟ್ ಅನ್ನ ಸಂಪೂರ್ಣ ತ್ಯಜಿಸುವುದೊಂದೇ ಉಪಾಯ, ಆದರೆ ನಮ್ಮ ಜೇವನ ಶೈಲಿ ಹಾಗು ಕಾರ್ಯವೈಖರಿ ಎಲ್ಲಾ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಇದರಲ್ಲಿ ನಾವು ಕೆಲವು ಬದಲಾವಣೆ ಮಾಡಿಕೊಂಡರೆ ಸ್ವಲ್ಪನಾದರೂ ಗೌಪ್ಯತೆ ಕಾಪಾಡಬಹುದು. ಕೆಲವು ಸುಲಭ ಉಪಾಯಗಳೆಂದರೆ:

  1. ಬ್ರೌಸರ್ ಗಳಲ್ಲಿ ಆಡ್ ಬ್ಲಾಕ್ ಎಕ್ಸಟೆನ್ಶನ್ ಬಳಸಿ
    ಲ್ಯಾಪ್ಟಾಪ್.ಕಂಪ್ಯೂಟರ್ ಗಳಲ್ಲಿ ನೀವು ಉಪಯೋಗಿಸುವ ಕ್ರೋಮ್, ಎಡ್ಜ್ ಅಥವಾ ಫಯರ್ ಫಾಕ್ಸ್ ಬ್ರೌಸರ್ ಗಳಲ್ಲಿ ಆಡ್ ಬ್ಲಾಕ್ ಎಕ್ಸಟೆನ್ಶನ್ ಬಳಸಿ. ಆಗ ಯಾವುದೇ ವೆಬ್ಸೈಟ್ ಗೆ ಹೋದರೆ ಅದರಲ್ಲಿ ಜಾಹಿರಾತು ಕಂಡು ಬರಲ್ಲ. ಆದರೆ ಇದು ಪಾಪ್-ಅಪ್ ಜಾಹೀರಾಗುಗಳಿಗೆ ಅನ್ವಯಿಸಲ್ಲ.
  2. ವಾಟ್ಸಪ್ಪ್ ಬಿಟ್ಟು ಸಿಗ್ನಲ್ ಆಪ್ ಬಳಸುವುದು
    ಈಗಂತೂ ವಾಟ್ಸಪ್ಪ್ ಇಲ್ಲದೆ ಇರೋಕೆ ಆಗಲ್ಲ ಕೆಲವರಿಗೆ, ನೀವು ಗೌಪ್ಯತೆಗೆ ಹೆಚ್ಚು ಒತ್ತು ನೀಡಿದರೆ, ಸಿಗ್ನಲ್ ಆಪ್ ಬಳಸುವುದು ಒಳ್ಳೆಯದು.
  3. ಕ್ಯಾಶೆ ಸ್ವಚ್ಛ ಮಾಡಿ
    ಕೋಕೀ ಹಾಗು ಕ್ಯಾಶೆ ಗಳೇ ಅದೆಷ್ಟೋ ಸ್ಟೋರೇಜ್ ಉಪಯೋಗಿಸುತ್ತೆ. ಮೊಬೈಲ್ ಅಥವಾ ಲ್ಯಾಪ್ಟಾಪ್/ಕಂಪ್ಯೂಟರ್ ಅಲ್ಲಿ ಕ್ಯಾಶೆ ಕ್ಲೀನರ್ ಬಳಸಿ. ಇದರಿಂದ ಕುಕೀ ಹಾಗು ಕ್ಯಾಶೆ ಸ್ವಚ್ಛ ಆಗುತ್ತೆ ಹಾಗು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್/ಕಂಪ್ಯೂಟರ್ ಅಲ್ಲಿ ಸ್ಟೋರೇಜ್ ಕೂಡ ಉಳಿಸಬಹುದು.
  4. ಡೇಟಾ ಟ್ರ್ಯಾಕಿಂಗ್ ಅನ್ನು ನಿಲ್ಲಿಸಿ?
    ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ಡೇಟಾ ಟ್ರ್ಯಾಕಿಂಗ್ ಅನ್ನು ನಿಲ್ಲಿಸಿ. ಇದರಿಂದ ಜಾಹಿರಾತು ಸಂಖ್ಯೆ ಕಡಿಮೆ ಆಗಲ್ಲ ಆದರೆ ನಿಮ್ಮ ಮಾಹಿತಿಯ ಆಧಾರದ ಮೇಲೆ ಜಾಹಿರಾತು ಬರಲ್ಲ.

Leave a Reply

Your email address will not be published. Required fields are marked *

error: Content is protected !!