ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ಡೇಟಾ ಟ್ರ್ಯಾಕಿಂಗ್ ಅನ್ನು ನಿಲ್ಲಿಸುವುದು ಹೇಗೆ?

ಯಾವುದೇ ವಿಷಯ ಅಥವ ಉತ್ಪನ್ನಗಳ ಬಗ್ಗೆ ಹುಡುಕಿ, ಅದರ ಬಗ್ಗೆ ಚರ್ಚಿಸಿ, ಕೆಲವೇ ಹೊತ್ತಿನಲ್ಲಿ ಗೂಗಲ್ ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ನಿಮಗೆ ಅದರ ಬಗ್ಗೆ ಜಾಹಿರಾತು ತೋರಿಸಿಬಿಡುತ್ತೆ. ಅದೆಷ್ಟೋ ಬಾರಿ ನಾವು ಇದರ ಬಗ್ಗೆ ತಲೆ ಕೇಡಿಸಿಕೊಳಲ್ಲ, ಆದರೆ ನಮ್ಮ ಮಾಹಿತಿ ಅವರಿಗೆ ಸಿಕ್ತು ಅಂತ ಒಂದ್ ಅನುಮಾನ ಇದ್ದೇ ಇರುತ್ತೆ. ನೀವು ಫ್ಲಿಪ್ ಕಾರ್ಟ್ ಅಮೆಜಾನ್ ನಂತಹ ಈ-ಕಾಮರ್ಸ್ ವೇದಿಕೆಯಲ್ಲಿ ಹುಡುಕಿದ ಹಾಗು ವೀಕ್ಷಿಸಿದ ಉತ್ಪನ್ನಗಳು, ಇವುಗಳ ಮಾಹಿತಿ ಸಂಗ್ರಹ (ಅದಕ್ಕೆ ಕ್ಯಾಶೆ ಹಾಗು ಕುಕೀಸ್ ಎನ್ನುತ್ತಾರೆ) ನಿಮ್ಮ ಮೊಬೈಲ್ ಅಥವಾ ವೆಬ್ ಬ್ರೌಸರ್ ಅಲ್ಲಿ ಉಳಿಸಿರುತ್ತೆ. ಇವಗಳ ಆಧಾರದ ಮೇಲೆ ನಿಮಗೆ ಜಾಹಿರಾತುಗಳು ಬರುತ್ತೆ. ಇದನ್ನ ಡೇಟ ಟ್ಟ್ರ್ಯಾಕ್ಕಿಂಗ್ ಅನ್ನುತ್ತಾರೆ ಹಾಗೂ ಇದರಿಂದ ತೋರಿಸಲಾದ ಜಾಹೀರಾತನ್ನು “Targeted Ads” ಅನ್ನುತ್ತಾರೆ. ಈ ಲೇಖನದಲ್ಲಿ ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ಡೇಟಾ ಟ್ರ್ಯಾಕಿಂಗ್ ಅನ್ನು ನಿಲ್ಲಿಸುವುದರ ಬಗ್ಗೆ ವಿವರಿಸಲಾಗಿದೆ.

ನೆನಪಿರಲಿ : ಇದರಿಂದ ಜಾಹಿರಾತುಗಳ ಸಂಖ್ಯೆ ಏನು ಕಡಿಮೆ ಆಗಲ್ಲ, ಆದ್ರೆ ನಿಮ್ಮ ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ಮಾಹಿತಿ ಹಾಗೂ ಚಟುವಟಿಕೆಗಳ  ಆಧಾರದ ಮೇಲೆ ಜಾಹಿರಾತು ಬರಲ್ಲ ಅಷ್ಟೇ (“Targeted Ads” ಬರಲ್ಲ). 

ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ಡೇಟಾ ಟ್ರ್ಯಾಕಿಂಗ್ ಅನ್ನು ನಿಲ್ಲಿಸುವುದು ಹೇಗೆ?

1.ಫೇಸ್ಬುಕ್ ಖಾತೆಯ settings and privacy ಆಯ್ಕೆ ಅಡಿ Settings ಆಯ್ಕೆಯೊಳಗೆ ಸ್ವಲ್ಪ ಸ್ಕ್ರೋಲ್ ಮಾಡಿದರೆ Ad Preferences ಆಯ್ಕೆ ಒತ್ತಿ.

 

2. Ad Preferences ಒಳಗೆ Ad Settings ಆಯ್ಕೆ ಅಡಿ ಒಂದಿಷ್ಟು ಆಯ್ಕೆಗಳಿವೆ. ಅದರಲ್ಲಿ ಒಂದೊಂದೇ ಹಂತ ಹಂತ ವಾಗಿ ನೋಡೋಣ.

 

(a). Data about your activity from partners : ಇದು ಫೇಸ್ಬುಕ್ ಇನ್‌ಸ್ಟಾಗ್ರಾಮ್ ಮೂಲಕ ಇತರೆ ವೆಬ್ಸೈಟ್ ಅಲ್ಲಿ ಮಾಡಲಾದ ಚಟುವಟಿಕೆಗಳ ಮೇಲೆ ಬರುವ ಜಾಹೀರಾತುಗಳು. ಇದನ್ನ ಸಂಪೂರ್ಣ ನಿಷ್ಕ್ರಿಯಗೊಳಿಸಲು ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಎರಡನ್ನೂ ಆಫ್ ಮಾಡಿ. ಇದು ಫೇಸ್ಬುಕ್ ಇಂದ ಇನ್‌ಸ್ಟಾಗ್ರಾಮ್ ಗೆ ಅಥವಾ ಇನ್‌ಸ್ಟಾಗ್ರಾಮ್ ನಿಂದ ಫೇಸ್ಬುಕ್ ಗೆ ಒಂದಕ್ಕಂದು ಮಾಹಿತಿ ಹಂಚಿ ಕೊಳ್ಳಲು ಬಿಡಲ್ಲ.

 

(b) Categories used to reach you : ಇದು ನಿಮ್ಮ ಪ್ರೊಫೈಲ್ ಅಲ್ಲಿ ತುಂಬಲಾದ ಮಾಹಿತಿ ಹಾಗೂ ನೀವು ಲೈಕ್ ಮಾಡಿದ ಪುಟಗಳ ಮಾಹಿತಿ ಮೇಲೆ ಜಾಹೀರಾತು ತೋರಿಸುವುದು. ಇದರಲ್ಲಿ ಎಲ್ಲ ಆಯ್ಕೆ ಆಫ್ ಮಾಡಿ. ಕೆಳಗೆ ಇರುವ interested categories ಮತ್ತು other categories, ಈ ಎರಡು ಏಕೆಯೊಳಗೆ ಇರುವ ಎಲ್ಲ ಜಾಹೀರಾತು ವರ್ಗವನ್ನು Remove ಮಾಡಿ.

(c) Audience-based advertising : ಇದು ನಿಮ್ಮ ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಅಲ್ಲಿ ನಿಮ್ಮ ಸಂಪೂರ್ಣ ವಿವರ, ಚಟುವಟಿಕೆಗಳು ಹಾಗೂ ಲೈಕ್ ಗಳ ಆಧಾರದ ಮೇಲೆ ತೋರಿಸುವ ಜಾಹೀರಾತುಗಳು. ಈ ಆಯ್ಕೆ ಒಳಗೆ ಹೋಗಿ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದರೆ ಒಂದಿಷ್ಟು ಜಾಹೀರಾತುಗಳ ಪಟ್ಟಿ ಕಾಣುವುದು. ಇದರಲ್ಲಿ ಒಂದೊಂದೇ ಜಾಹೀರಾತನ್ನು ಆಯ್ಕೆ ಮಾಡಿ ಹೀಗೆ ಮಾಡಿ.

Related:   ಫೇಸ್ಬುಕ್ ಎರಡು-ಅಂಶದ ದೃಢೀಕರಣ ಆಯ್ಕೆಯನ್ನು ಆನ್ ಮಾಡುವುದು ಹೇಗೆ ?

(d) Ads shown off of Facebook : ಎಂತ ಸಾವ್ ಮಾರ್ರೆ, ನಾವು ಫೇಸ್ಬುಕ್ ಅಲ್ಲದೆ ಇತರೆ ವೆಬ್ಸೈಟ್ ಆಪ್ ಗಳಲ್ಲಿ ಮಡುವ ಚಟುವಟಿಕೆಗಳಿಂದ ಕದ್ದ ಮಾಹಿತಿಯ ಮೇಲೆಯೂ ಫೇಸ್ಬುಕ್ ಜಾಹೀರಾತು ತೋರಿಸುತ್ತೆ. ಈ ಆಯ್ಕೆ ತೆರೆದು ಸ್ವಲ್ಪ ಸ್ಕ್ರೋಲ್ ಮಾಡಿ ಕೊಡಲೆ ಅಲ್ಲಿರುವ ಆಯ್ಕೆ ಯನ್ನು ಆಫ್ ಮಾಡಿ.

(e) Social Interactions : ಸರಿ ಹೋಯ್ತು -_-. ನಾವು ಯಾವ ಜಾಹೀರಾತನ್ನು ಲೈಕ್ ಮಾಡಿದ್ದೀವಿ ಎಂದು ನಮ್ಮ ಫೇಸ್ಬುಕ್ ಸ್ನೇಹಿತರ ವಾಲ್ ನಲ್ಲಿ ತೋರಿಸುವ ಆಯ್ಕೆ. ಈ ಆಯ್ಕೆ ತೆರೆದು ಸ್ವಲ್ಪ ಸ್ಕ್ರೋಲ್ ಮಾಡಿ ಕೊಡಲೆ ಅಲ್ಲಿರುವ ಆಯ್ಕೆ ಯನ್ನು ಆಫ್ ಮಾಡಿ.

ಈ ಲೇಖನ ನಿಮಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ! ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದಕ್ಕೆ ಸಂಬಂಧಿಸಿದ ಯಾವುದೇ ವಿಷಯ ನಿಮಗೆ ತಿಳಿದಿದ್ದರೆ, ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.

Leave a Reply

Your email address will not be published. Required fields are marked *

error: Content is protected !!