ಕ್ಯಾರಿಯರ್ ಅಗ್ರಿಗೇಷನ್ ಎಂದರೇನು? ಅದರ ಬಗ್ಗೆ ನಿಮಗೆಷ್ಟು ಗೊತ್ತು?

ಕ್ಯಾರಿಯರ್ ಆಗ್ರಿಗೇಷನ್ ಎನ್ನುವುದು 4G ಯ ಹಲವಾರು ತರಂಗಗಳನ್ನು ಏಕಮಾತ್ರಕ್ಕೆ ಎಲೆಕ್ಟ್ರಾನಿಕ್ ಸಾಧನಗಳಿಗೆ ತಲುಪಿಸುವ ಒಂದು ಟೆಕ್ನಾಲಜಿ.

ಅದರ ಉಪಯೋಗ ಏನು ?

ಕ್ಯಾರಿಯರ್ ಅಗ್ರಿಗೇಷನ್ ನ ಸಹಾಯದಿಂದ ನಾವು ಇಂಟರ್ನೆಟ್ ನ ವೇಗ ಹಾಗೂ ಸ್ಟ್ರೀಮಿಂಗ್ ಗುಣಮಟ್ಟ ಪಡೆಯಬಹುದು, ಇದರ ಸಹಾಯದಿಂದ ಕಡಿಮೆ PING ನೋಡಬಹುದು.

ಹೇಗೆ ಕೆಲಸ ಮಾಡುತ್ತೆ ?

ಒಂದು ನೆಟ್ವರ್ಕ್ ಹಲವಾರು ತರಂಗಗಳನ್ನು ಒಳಗೊಂಡಿರುತ್ತದೆ ಅದರಲ್ಲಿ ಫೋನ್ ಕರೆಗೆ ಮತ್ತು ಇಂಟರ್ನೆಟ್ ಗೆ ಬೇಕಾದ ತರಂಗ ಬೇರೆ ಆಗಿರುತ್ತದೆ, ಕ್ಯಾರಿಯರ್ ಆಗ್ರಿಗೇಷನ್ ನ ಸಹಾಯದಿಂದ ಹಲವಾರು ಇಂಟರ್ನೆಟ್ ತರಂಗಗಳು ಒಂದೇ ಸಮಯಕ್ಕೆ ನಮ್ಮ ಫೋನ್ ಗೆ ತಲುಪುತ್ತದೆ, ಇದರ ಮೂಲಕ ನಮಗೆ ಇಂಟರ್ನೆಟ್ ನ ವೇಗ ಹೆಚ್ಚುತ್ತೆ ಹಾಗು ಸ್ಟ್ರೀಮಿಂಗ್ ನ ಗುಣ ಮಟ್ಟ ಕೂಡ ಚೆನ್ನಾಗಿರುತ್ತೆ.

ಕ್ಯಾರಿಯರ್ ಅಗ್ರೀಗೇಷನ್ ನಮಗೆ ಹೇಗೆ ಲಭ್ಯ ?

ಕ್ಯಾರಿಯರ್ ಅಗ್ರೀಗೇಷನ್ ಅನ್ನು ಬಳಸಲು ನಮಗೆ 4G ನೆಟ್ವರ್ಕ್ ಬೇಕು ಹಾಗೂ ಅದನ್ನು ಮೊಬೈಲ್ ಕೂಡ ಸಪೋರ್ಟ್ ಮಾಡುಬೇಕು, ಸದ್ಯಕ್ಕೆ ಭಾರತದಲ್ಲಿ ಜಿಯೋ ತನ್ನ ನೆಟ್ವರ್ಕ್ ನ ಎಲ್ಲ ಬ್ಯಾಂಡ್ ಗಳಲ್ಲಿ ಕ್ಯಾರಿಯರ್ ಆಗ್ರಿಗೇಷನ್ ಅನ್ನು ಹೊಂದಿದೆ, ಹಾಗೂ ಏರ್ಟೆಲ್ ಎರಡು (4G)ಬ್ಯಾಂಡ್ ನಲ್ಲಿ, VI ಎರಡು (4G)ಬ್ಯಾಂಡ್ ನಲ್ಲಿ ಕ್ಯಾರಿಯರ್ ಆಗ್ರೀಗೇಷನ್ ಅನ್ನು ಹೊಂದಿದೆ. ಮೊಬೈಲ್ ನಲ್ಲಿ ಎಲ್ಲ 4G ಸಪೋರ್ಟ್ ಮಾಡುವ ಚಿಪ್ಸೆಟ್ ಅಲ್ಲಿ ಈ ಕ್ಯಾರಿಯರ್ ಅಗ್ರೀಗೇಷನ್ ಇದೆ, ಆದರೆ ಸ್ಮಾರ್ಟ್ಫೋನ್ ನ ಬ್ರಾಂಡ್ ಗಳು ತಮ್ಮ ಸಾಫ್ಟ್ವೇರ್ ಅಲ್ಲಿ ಇದನ್ನು ನಿಷ್ಕ್ರಿಯ ಗೊಳಿಸಿರುತ್ತಾರೆ.

ಕ್ಯಾರಿಯರ್ ಆಗರಿಗೇಷನ್ ಅನ್ನು ಹೊಂದಿರುವ ಚಿಪ್ ಸೆಟ್ ನ ಮಾಹಿತಿ : 

ಸ್ನಾಪ್ಡ್ರಾಗನ್ 460 ರ ನಂತರದ ಹಾಗೂ Mediatek (P,A,G, SERIES), ಇನ್ನಿತರ ಎಲ್ಲ ಬಗೆಯ ಚಿಪ್ ಗಳು ಕ್ಯಾರಿಯರ್ ಅಗ್ರಿಗೇಷನ್ ಅನ್ನು ಸಪೋರ್ಟ್ ಮಾಡುತ್ತದೆ.

 

Related:   ಗೂಗಲ್ ಖಾತೆಯಲ್ಲಿ ಸ್ಟೋರೇಜ್ ಉಳಿಸುವ ಸುಲಭ ಮಾರ್ಗ

Leave a Reply

Your email address will not be published. Required fields are marked *

error: Content is protected !!