ಇತರೆ ವೆಬ್ಸೈಟ್ ನಿಂದ ಫೇಸ್ಬುಕ್ ಇನ್‌ಸ್ಟಾಗ್ರಾಮ್ ನಿಮ್ಮ ಮಾಹಿತಿ ಕದಿಯುವುದನ್ನು ನಿಲ್ಲಿಸಿ

ನೀವು ಇತರೆ ವೆಬ್ಸೈಟ್ ಅಲ್ಲಿ ಮಾಡಲಾದ ಚಟುವಟಿಕೆಗಳಿಂದಲೂ ಸಹ ಫೇಸ್‌ಬುಕ್ ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಸದಾ ಟ್ರ್ಯಾಕ್ ಮಾಡುತ್ತಲೇ ಇರುತ್ತದೆ. ಬಹುಶಃ ಫೇಸ್ಬುಕ್ ಎಷ್ಟು ಟ್ರ್ಯಾಕ್ ಮಾಡುತ್ತದೆ ಎಂಬುದು ನಿಮಗೆ ತಿಳಿದಿಲ್ಲ ಅನ್ಸುತ್ತೆ. ಇತರ ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು, ಸೇವೆಗಳು ಮತ್ತು ನಿಜ ಜೀವನದಲ್ಲಿ ನೀವು ಭೇಟಿ ನೀಡುವ ಸ್ಥಳಗಳಿಂದಲೂ ಸಹ ಫೇಸ್ಬುಕ್ ಡೇಟಾವನ್ನು ಸಂಗ್ರಹಿಸುತ್ತದೆ.ಈ ಲೇಖನದಲ್ಲಿ ಇತರೆ ವೆಬ್ಸೈಟ್ ನಿಂದ ಫೇಸ್ಬುಕ್ ಇನ್‌ಸ್ಟಾಗ್ರಾಮ್ ನಿಮ್ಮ ಮಾಹಿತಿ ಕದಿಯುವುದನ್ನು ನಿಲ್ಲಿಸುವುದು ಹೇಗೆ ಎಂದು ವಿವರಿಸಲಾಗಿದೆ.

1. ಫೇಸ್ಬುಕ್ ಖಾತೆಯ Settings and Privacy ಆಯ್ಕೆ ಅಡಿ Settings ಆಯ್ಕೆಯೊಳಗೆ ಸ್ವಲ್ಪ ಸ್ಕ್ರೋಲ್ ಮಾಡಿದರೆ Off Facebook activity ಆಯ್ಕೆ ಒತ್ತಿ.

2. Off Facebook activity ಒಳಗೆ ಕೊನೆಯಲ್ಲಿ More Options ಆಯ್ಕೆ ಅಡಿ Manage Future Activity ಆಯ್ಕೆ ಒತ್ತಿ.

3. ಅದರ ಒಳಗೆ ಒಂದು ಮಾಹಿತಿಯ ಪುಟ ಬರುತ್ತೆ, ಅದರಲ್ಲಿ ಕೊನೆಯಲ್ಲಿ Manage Future Activity ಬಟನ್ ಒತ್ತಿ. Future Off -Facebook Activity ಎಂಬ ಆಯ್ಕೆ ಮೊದಲೇ ಒನ್ ಅಗಿರುತ್ತೆ, ಅದನ್ನ ಆಫ್ ಮಾಡಿ.

4. ಪುನಃ ಹಿಂದಕ್ಕೆ ಬಂದು, Clear History ಒತ್ತಿ, ಹಿಂದೆ ಅವರು ಕದ್ದಿರುವ ಮಾಹಿತಿಯನ್ನು ಸಂಪೂರ್ಣವಾಗಿ ಅಳಸಬಹುದು.

5. ಇದರಿಂದ ಫೇಸ್ಬುಕ್ ಇನ್‌ಸ್ಟಾಗ್ರಾಮ್ ಅಲ್ಲಿ ಜಾಹಿರಾತುಗಳ ಸಂಖ್ಯೆ ಏನು ಕಡಿಮೆ ಆಗಲ್ಲ ಹಾಗೂ ಇತರೆ ವೆಬ್ಸೈಟ್ ನಿಂದ ನಿಮ್ಮ ಮಾಹಿತಿ ಕಾಡಿಯುವುದನ್ನು ಕೂಡ ನಿಲ್ಲಿಸಲ್ಲ, ಆದರೆ ಕದ್ದು ಮಾಹಿತಿಯ ಆಧಾರದ ಮೇಲೆ ಜಾಹೀರಾತು ಬರಲ್ಲ ಅಷ್ಟೇ. ಇಲ್ಲಿ ನೀವು ಗಮನಿಸಿದರೆ, ಅವರೇ ಒಪ್ಪಿಕೊಂಡಿದ್ದಾರೆ ನೋಡಿ.
ಈ ಲೇಖನ ನಿಮಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ! ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದಕ್ಕೆ ಸಂಬಂಧಿಸಿದ ಯಾವುದೇ ವಿಷಯ ನಿಮಗೆ ತಿಳಿದಿದ್ದರೆ, ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.

Related:   ಫೇಸ್ ಬುಕ್ ನಲ್ಲಿ ಸ್ನೇಹಿತರ ಸಲಹೆಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ ?

Leave a Reply

Your email address will not be published. Required fields are marked *

error: Content is protected !!