ಫೇಸ್ಬುಕ್ ಅತೀ ಹೆಚ್ಚು ಜನ ಬಳಕೆ ಮಾಡುವ ಸಾಮಾಜಿಕ ಜಾಲತಾಣವಾಗಿದ್ದು ಪ್ರತಿನಿತ್ಯ ಹಲವಾರು ಜನರಿಗೆ ಹಾಗೂ ಉದ್ಯಮಕ್ಕೆ ಉಪಯುಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ತಮ್ಮ ಖಾತೆಯ ಬದ್ರತೆ ಹಾಗೂ ಸುರಕ್ಷತೆಯ ಚಿಂತೆಯಾಗಿದೆ. ಪ್ರತಿನಿತ್ಯ ಹಲವಾರು ಅಮಾಯಕರ ಫೇಸ್ಬುಕ್ ಖಾತೆಗಳು ಸ್ಪ್ಯಾಮರ್‌ಗಳ (spammers) ಮತ್ತು ಹ್ಯಾಕರ್‌ಗಳ (hackers) ಕುತಂತ್ರಕ್ಕೆ ಗುರಿಯಾಗುತ್ತಿದ್ದಾರೆ.
ನಿಮ್ಮ ಮೊದಲ ಆದ್ಯತೆ ನಿಮ್ಮ ಫೇಸ್ಬುಕ್ ಖಾತೆಯ ಬದ್ರತೆ :
ಫೇಸ್ಬುಕ್ ಅಲ್ಲಿ ಬರುವ ಪೋಸ್ಟ್ ಗಳಿಂದ ಆಗುವ ಅನುಕೂಲ ಹಾಗೂ ಮನರಂಜನೆಯ ಜೊತೆಗೆ ಖಾತೆಯ ಬದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಕೂಡ ಕಾಳಜಿ ಇರಬೇಕು. ಈ ಲೇಖನದಲ್ಲಿ ನಮಗೆ ಗೊತ್ತಿರುವ ಓದಿಷ್ಟು ಸಲಹೆಗಳನ್ನು ತಿಳಿಸುತ್ತಿದ್ದೇವೆ.
ನಿಮ್ಮ ಪಾಸ್ವರ್ಡ್ ಬಗ್ಗೆ ಎಚ್ಚರ:
ಜನರು ಫೇಸ್ಬುಕ್ ಖಾತೆ ರಚಿಸುವಾಗ ಪಾಸ್ವರ್ಡ್ ತಕ್ಷಣ ನೆನಪಾಗಲೆಂದು ಸಾಮಾನ್ಯವಾಗಿ ತಮ್ಮ ಮೊಬೈಲ್ ನಂಬರ್, ಇಮೇಲ್, ತಮ್ಮ ಹೆಸರು/ಜನ್ಮ ದಿನಾಂಕ ಅಥವಾ ತಮ್ಮ ಸ್ನೇಹಿತರು – ಪ್ರೀತಿಪಾತ್ರರ ಹೆಸರನ್ನು ಪಾಸ್ವರ್ಡ್ ಆಗಿ ಬಳಸುವುದು ಹೆಚ್ಚು. ದಯವಿಟ್ಟು ಆ ತಪ್ಪನ್ನು ಮಾದಲೇಬೇಡಿ. ನೀವು ಆಯ್ಕೆ ಮಾಡುವ ಪಾಸ್ವರ್ಡ್ ಹೇಗಿರಬೇಕೆಂದರೆ ನಿಮ್ಮ ಜೇವನದ ಇಷ್ಟ-ಕಷ್ಟಗಳಿಗೆ, ನಿಮ್ಮ ಬಯೋಡೇಟಾಗೆ ಹಾಗೂ ನಿಮ್ಮ ಸ್ನೇಹಿತರು- ಪ್ರೀತಿಪಾತ್ರರ ಬಗ್ಗೆ ಸಂಬಂಧಿಸಬಾರದು. ಇದರ ದುಷ್ಪರಿಣಾಮ ಯಾರಾದರೂ ನಿಮ್ಮ ಪಾಸ್ವರ್ಡ್ ಅನ್ನು ಊಹಿಸಿ (guess ಮಾಡಿ), ನಿಮ್ಮ ಫೇಸ್ಬುಕ್ ಖಾತೆಯನ್ನು ದುರ್ಬಳಕೆ ಮಾಡಬಹುದು ಇದರಿಂದ ನಮಗೆ ಕೆಡುಕೇ ಹೆಚ್ಚು. ಪಾಸ್ವರ್ಡ್ ಆಯ್ಕೆ ಮಾಡುವ ವಿಚಾರದಲ್ಲಿ ಹುಷಾರು.
2-ಹಂತದ ದೃಢೀಕರಣ ಆಯ್ಕೆ ಆನ್ ಮಾಡಿ. (Two-Factor Authentication)
ನಿಮ್ಮ ಫೇಸ್ ಬುಕ್ ಖಾತೆಯನ್ನು ಭದ್ರತೆಗೊಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವುದು 2-ಹಂತದ ದೃಢೀಕರಣ ಆಯ್ಕೆ. ಇದರಿಂದ ಬೇರೆಯವರ ಬಳಿ ನಿಮ್ಮ ಪಾಸ್ವರ್ಡ್ ಇದ್ದರೂ ಸಹ ಅವರು ನಿಮ್ಮ ಫೇಸ್ಬುಕ್ ಖಾತೆಗೆ ಲಾಗಿನ್ ಆಗಲು ಸಾಧ್ಯವಿಲ್ಲ. 2-ಹಂತದ ದೃಢೀಕರಣ ಆಯ್ಕೆಯೆಂದರೆ ಲಾಗಿನ್ ಆದ ಕೂಡಲೇ ನೀವು ಲಿಂಕ್ ಮಾಡಿದ ಮೊಬೈಲ್ ನಂಬರ್ ಗೆ ಓಟಿಪಿ ರವಾನೆಯಾಗುವುದು, ನೀವು ಆ ಒಟಿಪಿಯನ್ನು ನಮೂದಿಸಿದ ನಂತರವೇ ಖಾತೆಗೆ ಲಾಗಿನ್ ಆಗುವುದು.
ಫೇಸ್ಬುಕ್ ಪಾಸ್ವರ್ಡ್ ಅನ್ನು ಇಲ್ಲಿಯೂ ಹಾಕಬೇಡಿ
ನೀವು ಇತರ ವೆಬ್ಸೈಟ್ ಅಥವಾ ಆಪ್ ಗಳಿಗೆ ಸೈನ್ ಅಪ್ ಆಗಬೇಕಾದರೆ ಫೇಸ್ಬುಕ್ ಗೆ ನಮೂದಿಸಿದ ಪಾಸ್ವರ್ಡ್ ಯಾವುದೇ ಕಾರಣಕ್ಕೂ ಇತರೆ ಅಪ್ಲಿಕೇಷನ್ ಅಥವಾ ವೆಬ್ಸೈಟ್ ಗೆ ಹಾಕಬೇಡಿ. ಏಕೆಂದರೆ ಅದನ್ನು ಹೇಗೆ ಬೇಕಾದರೂ ದುರ್ಬಳಕೆ ಮಾಡಿಕೊಳ್ಳಬಹುದು. ಇತರೆ ವೆಬ್ಸೈಟ್/ಅಪ್ಲಿಕೇಷನ್ ಗೆ ಬೇರೆ ಪಾಸ್ವರ್ಡ್ ಹಾಕುವುದು ಒಳ್ಳೆಯದು.
ಲಾಗಿನ್ ವಿತ್ ಫೇಸ್ಬುಕ್ ಆಯ್ಕೆಯ ಬಗ್ಗೆ ಎಚ್ಚರವಿರಲಿ
ನಾವು ಸಾಕಷ್ಟು ಬಾರಿ ಯಾವುದೇ ಇತರ ವೆಬ್ಸೈಟ್/ಆಪ್ ಗಳಿಗೆ ಲಾಗಿನ್ ಆಗಬೇಕಾದರೆ ಸಮಯ ಉಳಿಸಲು ಲಾಗಿನ್/ ಸೈನ್ ಅಪ್ ವಿತ್ ಫೇಸ್ಬುಕ್ ಎಂಬ ಆಯ್ಕೆಯನ್ನು ಕೊಟ್ಟಿರುತ್ತೇವೆ. ಇದರ ಬಗ್ಗೆ ಎಚ್ಗರವಿರಲಿ, ವಿಶ್ವಾಸಾರ್ಹ ವೆಬ್ಸೈಟ್ ಅಥವಾ ಆಪ್ ಗಳಲ್ಲಿ ಯಾವುದೇ ಚಿಂತೆಯಿಲ್ಲ ಆದರೆ ಇತರೆ ಅಪರಿಚಿತ ಅಥವಾ ಅನುಮಾನಸ್ಪದ ವೆಬ್ಸೈಟ್ನಲ್ಲಿ ಯಾವುದೇ ಕಾರಣಕ್ಕೂ ಅದನ್ನು ಆಯ್ಕೆ ಮಾಡಬೇಡಿ. ಏಕೆಂದರೆ ಫೇಸ್ಬುಕ್ ಲಾಗಿನ್ ಪುಟದಂತೆಯೇ ನಕಲಿ ಸೈನ್ ಇನ್ / ಸೈನ್ ಅಪ್ ಪುಟವನ್ನು (web page) ರಚಿಸಲಾಗಿರುತ್ತದೆ ಒಂದು ವೇಳೆ ನೀವು ಫೇಸ್ಬುಕ್ ಅಂದು ಭಾವಿಸಿ ಲಾಗಿನ್ ವಿವರವನ್ನು ನಮೂದಿಸಿದರೆ, ನೀವಾಗಿಯೇ ನಿಮ್ಮ ಫೇಸ್ಬುಕ್ ಖಾತೆಯ ಲಾಗಿನ್ ಮಾಹಿತಿಯನ್ನು ಅವರಿಗೆ ನೀಡಿದಂತಾಗುತ್ತದೆ. ನಂತರ ಅವರು ನಿಮ್ಮ ಖಾತೆಗೆ ಲಾಗಿನ್ ಆಗಿ ದುರ್ಬಲಕ್ಕೆ ಮಾಡಬಹುದು. ಇನ್ನು ಮುಂದೆ ಈ ತರಹ ದ ವೆಬ್ ಸೈಟ್ /ಆಪ್ ಗೆ ಲಾಗ್ ಇನ್ / ಸೈನ್ ಅಪ್ ವಿತ್ ಫೇಸ್ಬುಕ್ ಆಯ್ಕೆಯನ್ನು ಕೊಡುವ ಬದಲು ಒಂದು ನಿಮಿಷ ಸಮಯ ತಗೊಂಡರು ಪರವಾಗಿಲ್ಲ ವಿವರವನ್ನು ತಾವಾಗಿಯೇ ಟೈಪ್ ಮಾಡಿ ನಮೂದಿಸಿ. 1 ನಿಮಿಷ ಸಮಯ ಉಳಿಸಲು ನಿಮ್ಮ ಫೇಸ್ಬುಕ್ ಖಾತೆಯ ಮುಡಿಪಾಗಿಡುವುದು ಒಳ್ಳೆಯದಲ್ಲ.
ಫೇಸ್ಬುಕ್ ಪಾಸ್ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ಯಾವುದೇ ಪರಿಚಿತ ಅಥವಾ ಅಪರಿಚಿತರೊಂದಿಗೆ ನಿಮ್ಮ ಫೇಸ್ಬುಕ್ ಖಾತೆಯ ಪಾಸ್ವರ್ಡ್ ಹಂಚಿಕೊಳ್ಳಬೇಡಿ. ಯಾರು ಯಾವ ರೀತಿಯ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದು ನಿಮಗೆ ಗೊತ್ತೇ ಆಗಲ್ಲ. ಹೆಣ್ಣು ಮಕ್ಕಳು ಮಾಡುವ ಸಾಮಾನ್ಯ ತಪ್ಪೆಂದರೆ ತಮ್ಮ ಫೇಸ್ಬುಕ್ ಖಾತೆಯ ಪಾಸ್ವರ್ಡ್ ತಮ್ಮ ಪ್ರೀತಿ ಪಾತ್ರರೊಡನೆ ಹಂಚಿಕೊಳ್ಳುವುದು, ಇದು ಮೇಲ್ನೋಟಕ್ಕೆ ಅವರಿಗೆ ನಂಬಿಕೆಯ ಸಾಬೀತುಪಡಿಸಲು ಸರಿ ಎನಿಸಿದರೂ, ನಂತರ ದುರ್ಬಳಕೆ ಆದ ಮೇಲೆ ಪಶ್ಚಾತಾಪ ಪಡುವುದು, ಅಕೌಂಟ್ ಡಿಲೀಟ್ ಮಾಡುವುದು, ಇನ್ನೊಬ್ಬರಿದೆ ಅಸಬಯ ಮೆಸೇಜ್ ಕಳುಹಿಸುವುದು ಎಲ್ಲಾ ರಗಳೆಗಳು ಇದ್ದದ್ದೇ.
‘ಟ್ಯಾಗ್ ರಾಜ’ರ ಬಗ್ಗೆ ಹುಷಾರು
ಕೆಲವರು ನಿಮ್ಮನ್ನ ಸಿಕ್ಕ ಸಿಕ್ಕ ಫೋಟೋಗಳಿಗೆ ಟ್ಯಾಗ್ ಮಾಡುತ್ತಲೇ ಇರುತ್ತಾರೆ. ಹಲವು ಬಾರಿ ಅವು ನಿಮ್ಮ ಪ್ರೊಫೈಲ್ ಅಲ್ಲಿ ಕಂಡು ಬಂದು ನಿಮಗೆ ಒಂದು ರೀತಿ ಮುಜುಗರ ಉಂಟು ಮಾಡುತ್ತದೆ. ಫೇಸ್ಬುಕ್ ಸೆಟ್ಟಿಂಗ್ ನಲ್ಲಿ ಟ್ಯಾಗ್ ಆಯ್ಕೆಯಲ್ಲಿ ‘’ರಿವೀವ್ (review)” ಆಯ್ಕೆ ಆನ್ ಮಾಡಿ, ಯಾರಾದರೂ ನಿಮ್ಮನ್ನ ಟ್ಯಾಗ್ ಮಾಡಿದರೆ ಅದು ನಿಮ್ಮ ಅನುಮತಿಗೆ ಬರುವುದು. ನೀವು ಒಪ್ಪೆಗೆ ಕೊಟ್ಟರೆ ಮಾತ್ರ ಅದು ನಿಮ್ಮ ಪ್ರೊಫೈಲ್ ಅಲ್ಲಿ ಕಂಡುಬರುವುದು. ಇದರಿಂದ ‘ಟ್ಯಾಗ್ ರಾಜ’ರ ಫೋಟೋ ನಿಮ್ಮ ಪ್ರೊಫೈಲ್ ಅಲ್ಲ ಕಾಣುವುದಿಲ್ಲ.
ಬೇಡದ ಅಪ್ಲಿಕೇಷನ್ ತೆಗದುಹಾಕಿ
ಕೆಲವೊಮ್ಮೆ ನೀವು ಸಮ್ಮತಿಸಿದ ವೆಬ್ಸೈಟ್/ಆಪ್ ಗಳು ಬದ್ರತೆ ಲೋಪ ಉಂಟು ಮಾಡಬಹುದು. ಫೇಸ್ಬುಕ್ ಸೆಟ್ಟಿಂಗ್ ಅಲ್ಲಿ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಎಂಬ ಆಯ್ಕೆಯಲ್ಲಿ ನೀವು ಗುರುತಿಸದ ಅಥವಾ ಅನುಮಾನಸ್ಪದ ಅಪ್ಲಿಕೇಷನ್ಗಳು ಕಂಡುಬಂದರೆ ಕೂಡಲೇ ಅದನ್ನು ತೆರೆಯಿರಿ. ನೆನಪಿರಲಿ ಫೇಸ್ಬುಕ್ ಮೂಲಕ ನೀಡಲಾದ ಹೆಸರು ಹಾಗೂ ಇಮೇಲ್ ಡಾಟಾ ಕೂಡ ತೆರವುಗೊಳ್ಳುತ್ತದೆ