ಟೆಲಿಗ್ರಾಂ ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಹೇಗೆ ಮರೆಮಾಡುವುದು ?


ಬಹುತೇಕ ಚಾಟ್ ಅಪ್ಲಿಕೇಷನ್ ಗಳು ಫೋನ್ ನಂಬರ್ ಅವಲಂಬಿತವಾಗಿದೆ. ವಾಟ್ಸಾಪ್ ಟೆಲಿಗ್ರಾಂ ನಂತಹ ಪ್ರಮುಖ ಮೆಸೇಜಿಂಗ್ ಆಪ್ ಗಳಲ್ಲಿ ಫೋನ್ ನಂಬರ್ ಇಲ್ಲದೆ ನೋಂದಣಿ ಆಗಲು ಸಾಧ್ಯವಿಲ್ಲ. ಟೆಲಿಗ್ರಾಮ್ ಆಪ್ ನಿಮಗೆ ಎರಡು ರೀತಿಯಲ್ಲಿ ಜನರನ್ನು ಹುಡುಕಲು ಹಾಗೂ ಚಾಟ್ ಮಾಡಲು ಅವಕಾಶ ಇದೆ, ಒಂದು ಫೋನ್ ನಂಬರ್, ಮತ್ತೊಂದು ಬಳಕೆದಾರ Username ಮೂಲಕ.  ಅಲ್ಲದೆ, ಪೂರ್ವನಿಯೋಜಿತವಾಗಿ, ಟೆಲಿಗ್ರಾಮ್ ನಿಮ್ಮ ಫೋನ್ ಸಂಖ್ಯೆಯನ್ನು ಪ್ರೊಫೈಲ್ ವಿಭಾಗದಲ್ಲಿ ತೋರಿಸುತ್ತದೆ. ನಿಮ್ಮ ಟೆಲಿಗ್ರಾಮ್ ಖಾತೆಯೊಂದಿಗೆ ಸಂಪರ್ಕಗೊಂಡಿರುವ ಎಲ್ಲಾ ಬಳಕೆದಾರರಿಗೆ ನಿಮ್ಮ ಫೋನ್ ನಂಬರ್ ಗೋಚರಿಸುತ್ತದೆ. ಒಂದು ವೇಳೆ ಅಪರಿಚಿತರು ನಿಮ್ಮನ್ನು ಫೋನ್ ನಂಬರ್ ಹುಡುಕಬಾರದು ಎಂದು ನೀವು ಬಯಸಿದರೆ, ನೀವು ಅದನ್ನು ಮರೆಮಾಡಲು ಟೆಲಿಗ್ರಾಮ್ ನಲ್ಲಿ ಆಯ್ಕೆ ಇದೆ.

ಟೆಲಿಗ್ರಾಂನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಮರೆಮಾಡಲು ಕ್ರಮಗಳು

  1. ಟೆಲಿಗ್ರಾಂ ಆಪ್ ಓಪನ್ ಮಾಡಿದ ಕೂಡಲೇ ಎಡಗಡೆ ಮೇಲೆ ಕಾಣುವ ಮೆನು ಐಕಾನ್ ಒತ್ತಿ, ಅಲ್ಲಿ Settings ಆಯ್ಕೆಮಾಡಿ.
  2. ಸೆಟ್ಟಿಂಗ್ ಆಯ್ಕೆಯಲ್ಲಿ Privacy & Security ಆಯ್ಕೆ ಒಳಗೆ ಹೋದರೆ ಅಲ್ಲಿ Phone Number ಎದುರು My Contacts ಅಂತ ಮೊದಲೇ ಆಯ್ಕೆಯಾಗಿರುತ್ತೆ. ನೀವು ಆ ಆಯ್ಕೆಯನ್ನು ಬದಲಾಯಿಸಲು ಅದರ ಮೇಲೆ ಒತ್ತಿ.
  3. ಇಲ್ಲಿ ಸಾಕಷ್ಟು ರೀತಿಯ ಗೌಪ್ಯತೆ ಆಯ್ಕೆಗಳು ಕಂಡುಬರುವುದು Nobody ಎಂದು ಆಯ್ಕೆ ಮಾಡಿ, ಅದರಲ್ಲಿ My contacts ಆಯ್ಕೆ ಮಾಡಿ ಇದರ ಅರ್ಥ ನಿಮ್ಮ ನಂಬರ್ ಅನ್ನು ಯಾರು Save ಮಾಡಿಕೊಂಡಿರುತ್ತಾರೋ ಅವರು ಮಾತ್ರ ನಿಮ್ಮನ್ನು ಟೆಲಿಗ್ರಾಮ್ ಅಲ್ಲಿ ಹುಡುಕಬಹುದು ಇದಲ್ಲದೆ. ನೀವು ಒಂದಿಷ್ಟು ಜನರನ್ನು ಹಾಗೂ Groups ಗಳು (groups ಅಂದರೆ, ಆ group ನ ಎಲ್ಲಾ ಸದಸ್ಯರು) ಹೊರತುಪಡಿಸಬಹುದು, ಅಂದರೆ ಕೆಲವರು ನಿಮ್ಮ ಫೋನ್ ನಂಬರ್ ಇಲ್ಲದೆ ಕೊಡ ನಿಮ್ಮ ಜೊತೆ  ಚಾಟ್ ಮಾಡಿರುತ್ತಾರೆ ಅಥವಾ ನೀವು ಸೇರಿರುವ Groups ನ ಸದಸ್ಯರು , ಅವರು ಕೊಡ ನಿಮ್ಮನ್ನು ಹುಡುಕಬಹುದು.
  4. ಇದಲ್ಲದೆ, ಹಲವು ರೀತಿಯ ಗೌಪ್ಯತೆ ಆಯ್ಕೆಗಳು ಕಂಡುಬರುವುದು, ಪ್ರತಿಯೊಂದು ಆಯ್ಕೆಯಲ್ಲಿ ನೀವು ಬದಲಾವಣೆ ಮಾಡಿ ನಿಮ್ಮ ಗೌಪ್ಯತೆ ಹೆಚ್ಚಿಸಿಕೊಳ್ಳಬಹುದು.

ಈ ಲೇಖನವು ನಿಮಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ! ದಯವಿಟ್ಟು ಅದನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ. ಇದಕ್ಕೆ ಸಂಬಂಧಿಸಿದ ಯಾವುದೇ ಅನುಮಾನಗಳಿದ್ದರೆ, ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.

Related:   ಗೂಗಲ್ ನಕ್ಷೆಗಳಲ್ಲಿ ಅದೃಶ್ಯ ಮೋಡ್ ನಲ್ಲಿ ಬಳಸುವುದು ಹೇಗೆ?

Leave a Reply

Your email address will not be published. Required fields are marked *

error: Content is protected !!