ಇನ್ಸ್ಟಾಗ್ರಾಂನಲ್ಲಿ ಉಡುಗೊರೆ ಸಂದೇಶ ಕಳುಹಿಸುವುದು ಹೇಗೆ?

ಇನ್‌ಸ್ಟಾಗ್ರಾಮ್ ಮೆಸೆಂಜರ್ ಹಾಗೂ ರೀಲ್ಸ್ ನವಿಕರಣದ ನಂತರ, ಈಗ ನಮ್ಮ ಡಿಎಂ(DM) ಸೆಟ್ಟಿಂಗ್‌ಗಳಲ್ಲಿ ಹಲವು ಬದಲಾವಣೆಗಳನ್ನು ತಂದಿದೆ, ಅವುಗಳೆಂದರೆ ಚಾಟ್ ಥೀಮ್, ಚಾಟ್ ಬಣ್ಣ, ಸಂದೇಶ ಕಣ್ಮರೆಯಾಗುವ ರೀತಿ ಮತ್ತು ಉಡುಗೊರೆ ಸಂದೇಶಗಳು. ಹಾಗಾದರೆ ಎನಿದು ಈ ಉಡುಗೊರೆ ಸಂದೇಶಗಳು? ಇದರ ಉಪಯೋಗವೆನು? ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ!

ಮೊದಲಿಗೆ ಉಡುಗೊರೆ ಸಂದೇಶ ಎಂದರೇನು?

ಉಡುಗೊರೆ ಸಂದೇಶವು ಅನನ್ಯ(ವಿಶಿಷ್ಟ) ಪ್ರಕಾರದ ಮಸಾಜ್ ಆಗಿದೆ, ಅದನ್ನು ನೀವು ಇನ್ಸ್ಟಾಗ್ರಾಂನಲ್ಲಿ ಯಾರಿಗಾದರೂ ಕಳುಹಿಸಬಹುದು. ಸಂದೇಶವನ್ನು ಬಾಕ್ಸ್ ಉಡುಗೊರೆ ರೀತಿಯಲ್ಲಿ ಕಳುಹಿಸಲಾಗುತ್ತದೆ ಮತ್ತು ಯಾರಾದರೂ ಅದನ್ನು ಮುಟ್ಟಿದಾಗ ಅದು ತೆರೆದು ನೀವು ಕಳುಹಿಸಿದ ಉಡುಗೊರೆಯನ್ನು ತೋರಿಸುತ್ತದೆ.

ನೀವು ಈ ತರಹದ ಉಡುಗೊರೆ ಸಂದೇಶಗಳನ್ನು ಜನ್ಮದಿನದ ಶುಭಾಶಯಗಳಿಗೆ , ವಾರ್ಷಿಕೋತ್ಸವದ ಶುಭಾಶಯಗಳಿಗೆ ಮತ್ತು ಯಾವುದೇ ವಿಶೇಷ ಸಂದರ್ಭದಲ್ಲಿ ಕಳುಹಿಸಬಹುದು ಅಥವಾ ನೀವು ಪಡೆಯಬಹುದು. ಇದು ನಿಮ್ಮ ಚಾಟ್ ಮಿನಿಮಯವನ್ನು ಇನ್ನಷ್ಟು ಕುತೂಹಲಕಾರಿ ಉಂಟುಮಾಡುತ್ತದೆ, ಯಾಕೆಂದರೆ ನೀವು ಕಳಿಸುವ ವ್ಯಕ್ತಿ ಉಡುಗೊರೆಯ  ಸಂದೇಶವನ್ನು ಸ್ಪರ್ಶಿಸುವವರೆಗೆ ಅದರಲ್ಲೇನಿದೆ ಎಂದು ತಿಳಿಯಲಾಗುವುದಿಲ್ಲ.  ಒಂದು ವೇಳೆ ಈ ವೈಶಿಷ್ಟ್ಯ ನಿಮ್ಮ instagram ಆವೃತಿಯಲ್ಲಿ ಲಭ್ಯವಿಲ್ಲ ಅಂದರೆ ಮುಂದಿನ ಅಪ್ಡೇಟ್ ಅಲ್ಲಿ ಬರಬಹುದು.

ಹಾಗಾದರೆ ಈ ಉಡುಗೊರೆ ಸಂದೇಶವನ್ನು ಹೇಗೆ ಕಳುಹಿಸುವುದು?

  1. ನಿಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ತೆರೆಯಿರಿ ಮತ್ತು DM(ಸಂದೇಶ)ನ ವಿಭಾಗಕ್ಕೆ ಹೋಗಿ. ನೀವು ಈ ಉಡುಗೊರೆ ಸಂದೇಶವನ್ನು ಕಳುಹಿಸಲು ಬಯಸುವ ಚಾಟ್/ವ್ಯಕ್ತಿಯನ್ನು ಆಯ್ಕೆ ಮಾಡಿ.
  2. ನೀವು ಕಳುಹಿಸಲು ಬಯಸುವ ಪದ(ಸಂದೇಶವನ್ನು) ಟೈಪ್ ಮಾಡಿ. ನಂತರ, ಸಂದೇಶ ಪಟ್ಟಿಗೆ ಎಡದಲ್ಲಿರುವ ಹುಡುಕಾಟ ಬಟನ್ ಕ್ಲಿಕ್ ಮಾಡಿ. (ಒಂದು ವೇಳೆ ನಿಮಗೆ ಹುಡುಕಾಟ ಬಟನ್ ಇಲ್ಲ ಅಂದ್ರೆ, ಮುಂದಿನ ಅಪ್ಡೇಟ್ ಅಲ್ಲಿ ಬರಬಹುದು)
  3. ಸದ್ಯಕ್ಕೆ ಇನ್ಸ್ಟಾಗ್ರಾಂನಲ್ಲಿ ಕೇವಲ 4 ಉಡುಗೊರೆ ಸಂದೇಶ ಪ್ರಕಾರಗಳನ್ನು ಹೊಂದಿದೆ, ನೀವು ಕಳುಹಿಸಲು ಬಯಸುವ ಯಾವುದೇ ಉಡುಗೊರೆಯನ್ನು ಕ್ಲಿಕ್ ಮಾಡಬಹುದು.
Related:   ಇನ್‌ಸ್ಟಾಗ್ರಾಮ್ ನಲ್ಲಿ ಮರೆಯಾಗುವ ಫೋಟೋ / ವಿಡಿಯೋಗಳನ್ನು ಕಳುಹಿಸುವುದು ಹೇಗೆ?

Leave a Reply

Your email address will not be published. Required fields are marked *

error: Content is protected !!