RAM EXPANSION ಎಂದರೇನು? ಇದರ ಬಳಕೆ ಹೇಗೆ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬ್ರಾಂಡ್ಗಳು ಹೊಸದೊಂದು ಫೀಚರ್ ಪರಿಚಯಿಸಿದೆ. ಅದೇ RAM EXPANSION, ಈ ಫೀಚರ್ ನ ಸಹಾಯ, ಅನುಕೂಲ ಹಾಗೂ ಇದರ ಬಳಸುವ ಬಗೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

 

RAM EXPANSION ಎಂದರೇನು?

ನಮ್ಮ ಫೋನ್ ನಲ್ಲಿ ದಿನನಿತ್ಯದ ಅಪ್ಲಿಕೇಶನ್ ಬಳಸಲು RAM ಅವಶ್ಯಕ, ಬೆಲೆಗೆ ತಕ್ಕಹಾಗೆ ಸ್ಮಾರ್ಟ್ ಫೋನ್ ತಯಾರಕರು ಫೋನ್ನಲ್ಲಿ ರಾಮ್ ನೀಡುತ್ತಾರೆ ಉದಾ (4GB,6GB,8GB,12GB) ಹೀಗೆ ಹೆಚ್ಚು RAM ಇದ್ದಷ್ಟು ಹೆಚ್ಚೆಚ್ಚು ಅಪ್ಲಿಕೇಶನ್ಗಳನ್ನು ಏಕಕಾಲಕ್ಕೆ ಬಳಸಬಹುದು. ಆದರೆ ಕಡಿಮೆ RAM ಹೊಂದಿರುವ ಫೋನ್ ಗಳಿಗೆ ಕೆಲ ಸ್ಮಾರ್ಟ್ಫೋನ್ ತಯಾರಕ ಕಂಪನಿಗಳು ಹೊಸದೊಂದು ಫೀಚರ್ ತಂದಿದೆ, ಅದೇ RAM EXPANSION, ಅಂದರೆ ಫೋನಿನ (ROM) ಸ್ಟೋರೇಜ್ ಅಥವಾ ಇಂಟರ್ನಲ್ ಸ್ಟೋರೇಜ್ ಅಲ್ಲಿ ಸ್ವಲ್ಪ ಮಟ್ಟದ ಭಾಗವನ್ನು RAM ತರಹ ಕೆಲಸ ಮಾಡಿಸುವ ಒಂದು ಟೆಕ್ನಾಲಜಿ ಇದರಿಂದ ಫೋನಿನ RAM ನ CAPACITY ಇನ್ನಷ್ಟು ಹೆಚ್ಚಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ ?

RAM EXPANSION ಎನ್ನುವುದು ಹೊಸ ಆವಿಷ್ಕಾರ ಎನ್ ಅಲ್ಲ, ಈ ಹಿಂದೆ ಲಿನಕ್ಸ್ ಹಾಗೂ ವಿಂಡೋಸ್ ಅಲ್ಲಿ ಈ ಫೀಚರ್ ಇತ್ತು ಇದನ್ನು ವರ್ಚುಯಲ್ ಮೆಮೊರಿ (VIRTUAL MEMORY) ಎಂದು ಎನ್ನುತ್ತಾರೆ, ಇದಕ್ಕೆ ಅಂತನೇ ಸ್ಟೋರೇಜ್ ನಲ್ಲಿ ಒಂದು ಭಾಗ ರಿಸರ್ವ್ ಆಗಿರುತ್ತೆ. RAM ಮಾಡುವ ಕೆಲಸ ಈ ರಿಸರ್ವ್ ಸ್ಟೋರೇಜ್ ಮಾಡುತ್ತದೆ, ಆದರೆ ಈ ವರ್ಚುಯಲ್ RAM ನ ಪರ್ಫಾರ್ಮೆನ್ಸ್ ಬಹಳ ನಿಧಾನವಾಗಿರುತ್ತದೆ, ಏಕೆಂದರೆ RAM ನ ವೇಗ ಸ್ಟೋರೇಜ್ ವೇಗಕ್ಕಿಂತ ಜಾಸ್ತಿ ಇರುತ್ತದೆ, ಹಾಗಾಗಿ RAMನಷ್ಟು ವೇಗವಾಗಿ ಈ ವರ್ಚುಯಲ್ RAM ಮಾಡಲಾಗುವುದಿಲ್ಲ. ಆದರೆ ಸಣ್ಣ / ಕಡಿಮೆ ಪರ್ಫಾರ್ಮೆನ್ಸ್ ಇರುವ ಅಪ್ಲಿಕೇಶನ್ ಉದಾ (ಕ್ಯಾಲಕ್ಲೇಟರ್, ಮುಸಿಕ್ ಪ್ಲೇಯರ್) ಗಳನ್ನು ವರ್ಚುಯಲ್ ಮೆಮೊರಿ ಅಲ್ಲಿ ಉಳಿಸಿಕೊಳ್ಳುತ್ತದೆ ಹಾಗಾಗಿ ಫೋನಿನ RAM ಗೆ ದೊಡ್ಡ ಅಪ್ಲಿಕೇಶನ್ ಉದಾ (BGMI, INSTAGRAM, CHROME) ಗಳನ್ನ ವೇಗವಾಗಿ ನಿಭಾಯಿಸುತ್ತದೆ. ಒಟ್ಟಾರೆಯಾಗಿ ಫೋನಿನ ಪರ್ಫಾರ್ಮೆನ್ಸ್ ವೇಗವಾಗುತ್ತದೆ.

ಆದರೆ ಬಳಸುವುದು ಹೇಗೆ?

ಇದನ್ನು ಬಳಸಲು ನಮಗೆ ಸ್ಮಾರ್ಟ್ಫೋನ್ ತಯಾರಕ ಕಂಪನಿಯವರು ಏನಾದರೂ ತನ್ನ ಸಾಫ್ಟ್ವೇರ್ ಅಲ್ಲಿ ಈ ವೈಶಿಷ್ಟ್ಯಆನ್ ಮಾಡಿದ್ದರೆ ಮಾತ್ರ ಬಳಸಬಹುದು, ಅಥವಾ ಸಾಫ್ಟ್ವೇರ್ ಅಪ್ಡೇಟ್ ಮೂಲಕ ಈ ಫೀಚರ್ ಕೊಡಬಹುದು, ಇತ್ತೀಚಿಗೆ Realme, Oppo ಹಾಗೂ ಇನ್ನಿತರ ಹಲವು ಸ್ಮಾರ್ಟ್ಫೋನ್ ಬ್ರಾಂಡ್ಗಳು ಈ ವೈಶಿಷ್ಟ್ಯ ಅನ್ನು ಪರಿಚಯಿಸಿದೆ ಮುಂದಿನ ದಿನಗಳಲ್ಲಿ ಎಲ್ಲಾ ಸ್ಮಾರ್ಟ್ಫೋನ್ ಕಂಪನಿಗಳು ಈ ವೈಶಿಷ್ಟ್ಯವನ್ನು ಪರಿಚಯಿಸಲಿದೆ.

Related:   ಆನ್ಲೈನ್ ಕ್ಲಾಸ್ ಗೆ ಸೂಕ್ತವಾದ ಹೆಡ್ ಫೋನ್ ಹಾಗೂ ಹೆಡ್ ಸೆಟ್ ಗಳು.

Leave a Reply

Your email address will not be published. Required fields are marked *

error: Content is protected !!