ಗೂಗಲ್ ನಕ್ಷೆಗಳಲ್ಲಿ ಅದೃಶ್ಯ ಮೋಡ್ ನಲ್ಲಿ ಬಳಸುವುದು ಹೇಗೆ?

ಗೂಗಲ್ ಮ್ಯಾಪ್ ಒಂದು ಉತ್ತಮ ನ್ಯಾವಿಗೇಷನ್ ಅಪ್ಲಿಕೇಶನ್ ಆಗಿದ್ದು ಅದು ಹತ್ತಿರದ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಏಟಿಎಮ್, ರೆಸ್ಟೋರೆಂಟ್‌ಗಳು ಮತ್ತು ಇತರೆ ಉಪಯುಕ್ತ ಸ್ಥಳಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಬೆಂಗಳೂರಲ್ಲಿ ಗೂಗಲ್ ಮ್ಯಾಪ್ ಇಲ್ಲದೆ ಹೊಸಬ್ಬರು ತಿರುಗಾಡಲು ಆಗೋದಿಲ್ಲ.

ವೆಬ್ ಬ್ರೌಸರ್‌ಗಳಂತೆ, ಗೂಗಲ್ ಮ್ಯಾಪ್ ಅಲ್ಲೂ ಕೂಡ ‘ಅದೃಶ್ಯ ಅಥವಾ ಅಜ್ಞಾತ ಮೋಡ್’ (‘Incognito Mode’) ಆಯ್ಕೆಯನ್ನು ಹೊಂದಿವೆ. ಈ ಆಯ್ಕೆ ಗೂಗಲ್ ಮ್ಯಾಪ್ ಅನ್ನು ಖಾಸಗಿಯಾಗಿ ಅಥವಾ ಗೌಪ್ಯವಾಗಿ ಬಳಸಲು ಸಹಾಯ ಮಾಡುತ್ತದೆ. ಇದರಿಂದ ಒಂದು ಬಹಳ ಮುಖ್ಯ ವೈಶಿಷ್ಟ್ಯ ಏನಂದರೆ ‘‘ಅದೃಶ್ಯ ಮೋಡ್’ ನಿಂದ ನೀವು ಹುಡುಕಿದ ಅಥವಾ ತಿರುಗಾಡಿದ ಸ್ಥಳಗಳನ್ನು ನಿಮ್ಮ ಗೂಗಲ್ ಖಾತೆ ಉಳಿಸಲ್ಲ. ನಿಮಗೆ ಯಾವುದೇ ತರಹದ ಅಧಿಸೂಚನೆ ಕೂಡ ಬರಲ್ಲ. ನೀವು ‘‘ಅದೃಶ್ಯ ಮೋಡ್’ನಲ್ಲಿ ಮಾಡುವ ಯಾವುದೇ ಚಟುವಟಿಕೆಗಳು ಅನಾಮಧೇಯವಾಗಿರುತ್ತದೆ.

‘‘ಅದೃಶ್ಯ ಮೋಡ್” ಆನ್ ಮಾಡೋದಾದ್ರು ಹೇಗೆ ?

  1. ಗೂಗಲ್ ಮ್ಯಾಪ್ ಓಪನ್ ಮಾಡಿ, ಮೇಲೆ ಬಲಗಡೆ ಮೂಲೆಯಲ್ಲಿ ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣುವ ಆಯ್ಕೆಗಳಲ್ಲಿ ‘Turn on Incognito Mode’ (ಅದೃಶ್ಯ ಮೋಡ್ ಆನ್ ಮಾಡಿ ಆಯ್ಕೆ) ಆಯ್ಕೆಯನ್ನು ಆರಿಸಿ.
  2. ಆ ಆಯ್ಕೆಯನ್ನು ಆರಿಸಿದ ಕೊಡಲೆ ಒಂದು ಬಾರಿ ಗೂಗಲ್ ಮ್ಯಾಪ್ ಅಪ್ಲಿಕೇಷನ್ ತಾನಾಗಿಯೇ ರೀಸ್ಟಾರ್ಟ್ ಆಗುವುದು (ಆಪ್ ನಿರ್ಗಮಿಸಿ ಪುನಃ ತೆರೆಯುವುದು) ನಂತರ ಕೆಳಗೆಕಾಣುವ ಡೈಲಾಗ್ ಬಾಕ್ಸ್ ಕಾಣುವುದು, ಅದನ್ನ ಮುಚ್ಚಿರಿ. ನಂತರ ಸ್ಕ್ರೀನ್ ಮೇಲ್ ಭಾಗದಲ್ಲಿ “Incognito mode is on” (ಅಜ್ಞಾತ ಮೋಡ್ ಆಗಿದೆ) ಎಂದು ಕಪ್ಪು ಪಟ್ಟಿಯಲ್ಲಿ ತೋರಿಸುತ್ತದೆ.
  3. ‘‘ಅದೃಶ್ಯ ಮೋಡ್’ ನಿಂದ ನಿರ್ಗಮಿಸಲು, ಮತ್ತೆ ಪ್ರೊಫೈಲ್ ಫೋಟೋ ಮೇಲೆ ಒತ್ತಿ, ಅಲ್ಲಿ ‘ಅದೃಶ್ಯ ಮೋಡ್ ಆಫ್ ಮಾಡಿ’ ಬಟನ್ ಒತ್ತಿ. ಕೊಡಲೆ ಗೂಗಲ್ ಮ್ಯಾಪ್ ಅಪ್ ರೀಸ್ಟಾರ್ಟ್ ಆಗುವುದು. ಈಗ ಮೇಲ್ ಭಾಗದಲ್ಲಿ ಕಪ್ಪು ಪಟ್ಟಿ ತೋರಿಸಲ್ಲ. ಇದರ ಅರ್ಥ ಅಜ್ಞಾತ ಮೋಡ್ ಬಲಸುತ್ತಿಲ್ಲ ಎಂದರ್ಥ.

ಇಷ್ಟೇ, ಹೀಗೆ ನೀವು ಗೂಗಲ್ ಮ್ಯಾಪ್ ನಲ್ಲಿ ಅಜ್ಞಾತ ಮೋಡ್ ಬಳಸಬಹುದು. ಈ ಲೇಖನ ನಿಮಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ! ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದಕ್ಕೆ ಸಂಬಂಧಿಸಿದ ಯಾವುದೇ ವಿಷಯ ನಿಮಗೆ ತಿಳಿದಿದ್ದರೆ, ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.

Related:   ಗೂಗಲ್ ಖಾತೆಯಲ್ಲಿ ಸ್ಟೋರೇಜ್ ಉಳಿಸುವ ಸುಲಭ ಮಾರ್ಗ

Leave a Reply

Your email address will not be published. Required fields are marked *

error: Content is protected !!