ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಬದಲಾವಣೆ ಹಾಗೂ ನಿರ್ಬಂಧಗಳು

‘ಕ್ರಾಫ್ಟನ್’ ದಕ್ಷಿಣ ಕೊರಿಯಾದ ಅತಿ ದೊಡ್ಡ ಗೇಮಿಂಗ್ ಕಂಪನಿಯಾಗಿದ್ದು PUBG ಕಂಪ್ಯೂಟರ್ ಹಾಗೂ ಗೇಮಿಂಗ್ ಕನ್ಸೋಲ್ ಆವೃತ್ತಿಯ ಮಾಲೀಕತ್ವ ಹೊಂದಿದೆ ಇದರ ಮೊಬೈಲ್ ಆವೃತ್ತಿಯು ಹಲವು ದೇಶಗಳಲ್ಲಿ ಬಹಳ ಜನಪ್ರಿಯವಾಗಿದ್ದು ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಮೊಬೈಲ್ ಗೇಮ್ ಎಂಬ ಖ್ಯಾತಿ ಇದೆ ಕಳೆದ ವರ್ಷ ಭಾರತ ಸರ್ಕಾರವು PUBG MOBILE ಗೇಮ್ ಅನ್ನು ಬ್ಯಾನ್ ಮಾಡಿತ್ತು ಆನಂತರ ಮಾತೃ ಸಂಸ್ಥೆಯಾದ ಕ್ರಾಫ್ಟನ್ ಭಾರತ ಸರ್ಕಾರದ ನೀತಿ-ನಿಯಮಗಳನ್ನು ಪಾಲಿಸಿ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ  ಎಂಬ ಮತ್ತೊಂದು ಗೇಮ್ ಅನ್ನು ಬಿಡುಗಡೆಗೊಳಿಸಿತು 18 ವರ್ಷದ ಕೆಳಗಿನ ವಯಸ್ಸಿನವರು ಈ ಗೇಮ್ ಆನಂದಿಸಬೇಕಾದರೆ ಕೆಲವು ಷರತ್ತುಗಳನ್ನು ವಿಧಿಸಿದೆ ಅದರ ವಿವರಣೆಯನ್ನು ನೋಡುತ್ತಾ ಹೋಗೋಣ

ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಓಟಿಪಿ

18 ವರ್ಷದ ಕೆಳಗಿನ ವಯಸ್ಸಿನವರು ಈ ಗೇಮ್ ಅನ್ನು ಆನಂದಿಸಬೇಕಾದರೆ ಮೊದಲು ತಮ್ಮ ಮೊಬೈಲ್ ನಂಬರನ್ನು ನಮೂದಿಸಬೇಕು ಆನಂತರ ಆ ನಂಬರ್ ಗೆ ಒಂದು ಬಾರಿ ಉಪಯೋಗವಾಗುವ ಒಂದು ಕೋಡ್ ಬರುತ್ತದೆ ಅದನ್ನು ನಮೂದಿಸಬೇಕಾಗುತ್ತದೆ ಆನಂತರ ಗೇಮ್ ನ ಕಂಟೆಂಟ್ ಅನ್ನು ಆನಂದಿಸಬಹುದು

ಎಷ್ಟು ಬಾರಿ ಹೀಗೆ ನಡೆಯುತ್ತದೆ
ಒನ್ ಟೈಮ್ ಪಾಸ್ ವರ್ಡ್ ರಿಕ್ವೆಸ್ಟ್ ಕಳುಹಿಸಿದ ಮೂರು ನಿಮಿಷದ ಒಳಗೆ ದೊರೆಯುತ್ತದೆ. ಅದನ್ನು ದಿನದ 24 ಗಂಟೆಯಲ್ಲಿ ಹತ್ತು ಬಾರಿ ಓಟಿಪಿ ರಿಕ್ವೆಸ್ಟ್ ಕಳುಹಿಸಬಹುದು ಆನಂತರ 18 ವರ್ಷದ ಕೆಳಗಿನ ಆಟಗಾರರು ಅಪ್ಲಿಕೇಶನ್ ಅನ್ನು ಉಪಯೋಗಿಸಲು ಆಗುವುದಿಲ್ಲ

18 ವರ್ಷದ ಕೆಳಗಿನ ಆಟಗಾರರಿಗೆ ಮತ್ತಷ್ಟು ನಿರ್ಬಂಧಗಳು
Krafton ನ ಅಧಿಸೂಚನೆಗಳ ಪ್ರಕಾರ 18 ವರ್ಷದ ಕೆಳಗಿನ ಆಟಗಾರರು ದಿನಕ್ಕೆ 3 ಗಂಟೆ ಸತತವಾಗಿ ಆಡಬಹುದು ಆನಂತರ ಆಗುವುದಿಲ್ಲ ಹಾಗೂ ಗೇಮ್ ನ ಒಳಗೆ UC ಖರೀದಿಸಲು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ದಿನಕ್ಕೆ ಕೆಲವು ಮಾತ್ರ ಕಾಯಿನ್ ಅನ್ನು ಖರೀದಿಸಲು ಅವಕಾಶ ಕೊಡಲಾಗುತ್ತದೆ

BATTLEGROUND MOBILE INDIA ನ ಬದಲಾವಣೆಗಳು

ಪಬ್ಜಿ ಮೊಬೈಲ್ ಭಾರತದಲ್ಲಿ ಬ್ಯಾನ್ ಆದನಂತರ ಮಾತೃ ಸಂಸ್ಥೆಯಾದ KRAFTON ಭಾರತದಲ್ಲಿರುವ ಆಟಗಾರರಿಗಾಗಿ ಹಲವು ಬದಲಾವಣೆಗಳೊಂದಿಗೆ ಬೇರೆ ಅಪ್ಲಿಕೇಶನ್ ಅನ್ನು ತಯಾರಿಸಿದೆ ಅದರಲ್ಲಿ ಆದ ಬದಲಾವಣೆಗಳಂದರೆ

  1. ಇನ್ ಗೇಮ್ ಮ್ಯಾನೇಜ್ಮೆಂಟ್
    ಆಟಗಾರರು ಪ್ರತೀಸಲ ಅಪ್ಲಿಕೇಶನ್ ಅನ್ನು ಓಪನ್ ಮಾಡಿದಾಗ ಇದೊಂದು ಕಾಲ್ಪನಿಕ ಎಂಬ ಸಂದೇಶ ತೋರಿಸಲಾಗುತ್ತದೆ.
  2. ಕಿಲ್ ಸಂದೇಶ
    ಆಟಗಾರ ತನ್ನ ಎದುರಾಳಿಯನ್ನು ಸೋಲಿಸಿದಾಗ KILLED ಎಂಬ ಸಂದೇಶವು ಈಗ FINISHED ಎಂದು ಬದಲಾಗಿದೆ ಹಾಗೂ ಕೆಂಪು ಬಣ್ಣದ KILL ಎಫೆಕ್ಟ್ ಈಗ ಹಸಿರು ಬಣ್ಣಕ್ಕೆ ಬದಲಾಗಿದೆ.
  3. ಭಾರತೀಯರ ಭಾಷೆ
    ಮೊದಲು ಇಂಗ್ಲಿಷ್ನಲ್ಲಿ ಇದ್ದ ಅಪ್ಲಿಕೇಶನ್ ಈಗ ಗೇಮ್ ಅಲ್ಲಿ ಹಿಂದಿ ಭಾಷೆ ನೋಡಸಿಗುತ್ತದೆ. (BETA) ಆಟದೊಳಗಿನ ಸಂದೇಶ ಕೂಡ ಹಿಂದಿ ಭಾಷೆ ಲಭ್ಯವಾಗಿದೆ
  4. ಸರ್ವರ್ ಆಯ್ಕೆ
    ಹಿಂದೆ ಆಟಗಾರು ತನಗೆ ಬೇಕಾದ ದೇಶದ ಸ್ನೇಹಿತರ ಜೊತೆಗೆ ಗೇಮ್ ಆನಂದಿಸಬಹುದಿತ್ತು ಹಾಗು ತನಗೆ ಬೇಕಾದ ಸರ್ವರ್ ಬದಲಾಯಿಸಬಹುದಿತ್ತು ಆದರೆ ಈಗ ಆಯ್ಕೆಅನ್ನು ತೆಗೆದುಹಾಕಲಾಗಿದೆ. ಭಾರತದಲ್ಲಿರುವವರು ಭಾರತದ ಆಟಗಾರರೊಂದಿಗೆ ಮಾತ್ರ ಆಡಬಹುದು
Related:   ಓಲಾ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳು ಹಾಗೂ ಬೆಲೆ

 

Leave a Reply

Your email address will not be published. Required fields are marked *

error: Content is protected !!