ಜಗತ್ತಿನ ಅತಿ ದೊಡ್ಡ ಸಾಮಾಜಿಕ ಜಾಲತಾಣದ ಫೇಸ್ಬುಕ್ ನಲ್ಲಿ ಇತ್ತೀಚಿಗೆ ನಕಲಿ ಖಾತೆ ಗಳ ಹಾವಳಿ ಹೆಚ್ಚಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಜನರು ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕಾರಣವನ್ನು ಲಾಭವಾಗಿ ಇಟ್ಟುಕೊಂಡು ಕೆಲ ವಂಚಕರು ನಕಲಿ ಖಾತೆಗಳ ಮುಖಾಂತರ ಹಣ ಮಾಡಲು ಮುಂದಾಗಿದ್ದಾರೆ.
ಇತ್ತೀಚಿಗೆ ಕಿಡಿಗೇಡಿಗಳು ಮತ್ತೊಬ್ಬರ ಹೆಸರಲ್ಲಿ ಫೇಸ್ಬುಕ್ ಖಾತೆ ತೆರೆದು ಅವರ ಸ್ನೇಹಿತರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ರಿಕ್ವೆಸ್ಟ್ ನೋಡಿದವರು ಇದು ಅವರದೇ ಹೊಸ ಪ್ರೊಫೈಲ್ ಇರಬಹುದು ಎಂದು ಭಾವಿಸಿ ರಿಕ್ವೆಸ್ಟ್ ಮಾಡುತ್ತಾರೆ. ನಂತರ ಇನ್ ಬಾಕ್ಸ್ ಅಲ್ಲಿ ಯಾವುದೋ ಕಾರಣಗಳನ್ನು ಹೇಳಿಕೊಂಡು ಒಂದು ಫೋನ್ ಪೆ ಅಥವಾ ಗೂಗಲ್ ಪೆ ನಂಬರ್ ಮೂಲಕ ಹಣ ಕಳುಹಿಸಿ ಎಂದು ಬೇಡಿಕೊಳ್ಳುತ್ತಾರೆ. ಇದನ್ನು ಸಾಕಷ್ಟು ಜನರು ಪರಿಶೀಲಿಸದೆ ನಿಜ ಎಂದು ಭಾವಿಸಿ ಹಣ ಕಳುಹಿಸುತ್ತಾರೆ.
ಏನಿದು ನಕಲಿ ಖಾತೆ ವಿಷ್ಯ ? ಎನ್ ಸಮಾಚಾರ ?
ಎಲ್ಲಾ ಫ್ರೆಂಡ್ ರಿಕ್ವೆಸ್ಟ್ ಇಂದ ಶುರು ಆಗುತ್ತೆ. ನಿಮ್ಮ ಫೇಸ್ಬುಕ್ ಸ್ನೇಹಿತರ ಹೆಸರಲ್ಲಿ ಹೊಸ ಫೇಸ್ಬುಕ್ ಖಾತೆ (ನಕಲಿ ಖಾತೆ) ತೆರೆದು ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ನೀವು ಬಹುಶಃ ಅವರ ಹಳೇ ಖಾತೆ ಏನೋ ಆಗಿರಬೇಕು ಅಂದು ಭಾವಿಸಿ ಅವರ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಳಳುತೀರ. ಒಂದುವೇಳೆ ನೀವು ಅವರ ಬಳಿ ಚಾಟ್ ಮಾಡಲಿಕ್ಕೆ ಮುಂದಾದರೆ, ಅವರು ಸಾಧಾರಣವಾಗಿಯೇ ನಿಮ್ಮ ಬಳಿ ಚಾಟ್ ಮಾಡುತ್ತಾರೆ.
ರಿಕ್ವೆಸ್ಟ್ ಒಪ್ಪಿದ ಬಳಿಕ ಸಾಮಾನ್ಯವಾಗಿ ಅವರಿಂದಲೇ ಚಾಟ್ ಶುರು ಆಗುತ್ತದೆ. ಕೊರೊನ, ಅಪಘಾತ, ಅನಾರೋಗ್ಯ ಅಂತ ಏನೇನೋ ಕಾರಣ ಹೇಳಿ ಒಂದು phonepe/googlepay/paytm ನಂಬರ್ ಮೂಲಕ ಹಣದ ಅವಶ್ಯಕತೆ ಇದೆ ಎಂದು ಸಹಾಯ ಕೇಳುತ್ತಾರೆ. ಇದ ನಿಜ ಎಂದು ನಂಬಿ ಎಷ್ಟೋ ಜನ ಹಣ ಕಳುಹಿಸಿದ್ದಾರೆ. ಬಹುತೇಕ ಜನ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಆದರೆ ಕೆಲವರು ಮಾತ್ರ ಇದು ನಕಲಿ ಖಾತೆ ಎಂದು ಖಚಿತ ಮಾಡಿಕೊಂಡು ಅವರನ್ನ ಬ್ಲಾಕ್ ಮಾಡುತ್ತಾರೆ. ಇದು ಕೆಲವು ತಿಂಗಳಿಂದ ಆಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗಿದೆ.
ಹಾಗಾದರೆ ನಕಲಿ-ಅಸಲಿ ಖಾತೆ ಪತ್ತೆ ಹಚ್ಚುವುದು ಹೇಗೆ ?
ಪರೀಚಿತರ ಖಾತೆಯಿಂದ ರಿಕ್ವೆಸ್ಟ್ ಬಂದರೆ, ಅವರನ್ನು ಸಂಪರ್ಕ ಮಾಡಿ ಒಮ್ಮೆ ಕೇಳಿ ನೋಡಿ. ಅದು ನಕಲಿ ಖಾತೆ ಎಂದು ತಿಳಿದ ತಕ್ಷಣ, ರಿಪೋರ್ಟ್ ಮಾಡಿ. ಒಂದು ವೇಳೆ ಅಪರೀಚಿತರು ಈಗಾಗಲೇ ನಿಮ್ಮ ಖಾತೆಯಲ್ಲಿ ಫ್ರೆಂಡ್ ಆಗಿದ್ದು, ಅವರ ಹೆಸರಲ್ಲಿ ರಿಕ್ವೆಸ್ಟ್ ಬಂದರೆ ಬಹುಶಃ ನಿಮಗೆ ಗೊತ್ತಾಗುತ್ತದೆ, ಏಕೆಂದರೆ ಚಾಟ್ ಅಲ್ಲಿ ಯಾವತ್ತೂ ಹಣ ಕೇಳದವರು ಏಕಾಏಕಿ ಹಣ ಕೇಳಲು ಮುಂದಾಗುತ್ತಾರೆ. ಆಗ ತಕ್ಷಣ ರಿಪೋರ್ಟ್ ಮಾಡಿ. ಯಾವುದಕ್ಕೂ ಅಪರೀಚಿತರನ್ನು ನಿಮ್ಮ ಖಾತೆಯಿಂದ ದೂರವಿಡುವುದು ಒಳ್ಳೆಯದು.
ಫೇಕ್ ಪ್ರೊಫೈಲ್ ಮಾಡಲು ಫೋಟೋಸ್ ಹೇಗೆ ಸಿಕ್ಕಿತು ?
ನಾವು ಇದರ ಬಗ್ಗೆ ರಿಸರ್ಚ್ ಮಾಡಿ ತಿಳಿದ ವಾಸ್ತವ.
- ನಿಮ್ಮ ಖಾತೆಯಲ್ಲಿರುವ ಯಾರಾದರು ಫ್ರೆಂಡ್ ಪ್ರೊಫೈಲ್ ಹ್ಯಾಕ್ ಆಗಿ, ಅವರ ಪ್ರೊಫೈಲ್ ಮೂಲಕ ನಿಮ್ಮ ಫೋಟೋಸ್ ಸಿಕ್ಕಿರಬಹುದು.
- ಸಿಕ್ಕ ಸಿಕ್ಕ ಅಪರೀಚಿತರ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಗೆ ಕೊಡುತ್ತಿದರೆ, ಅದರಲ್ಲಿ ಒಬ್ಬರು ನಕಲಿ ಖಾತೆ ಉದ್ದೇಶದಿಂದ ರಿಕ್ವೆಸ್ಟ್ ಕಳುಹಿಸುತ್ತಾರೆ.
ನಕಲಿ ಖಾತೆಯನ್ನು ರಿಪೋರ್ಟ್ ಹೇಗೆ ಮಾಡುವುದು?
- ನಕಲಿ ಖಾತೆಯ ಪ್ರೊಫೈಲ್ ನಲ್ಲಿ ಕೆಳಗಿನ ಚಿತ್ರದಲ್ಲಿ ತೋರಿಸಿರುವ ರೀತಿ ಮೂರು ಚುಕ್ಕಿ ಮೇಲೆ ಒತ್ತಿ Find support or report profile’ ಎಂಬ ಆಯ್ಕೆ ಮಾಡಬೇಕು, ನಂತರ ‘Pretending to be someone’ ಆಯ್ಕೆ ಮಾಡಬೇಕು.
- ಒಂದು ವೇಳೆ ನಿಮ್ಮ ಹೆಸರಲ್ಲಿ ನಕಲಿ ಖಾತೆ ಸೃಷ್ಠಿ ಆಗಿದ್ದರೆ Me ಆಯ್ಕೆ ಮಾಡಬೇಕು. ನಿಮ್ಮ ಸ್ನೇಹಿತರ ಹೆಸರಲ್ಲಿ ಸೃಷ್ಠಿ ಆಗಿದ್ದರೆ ‘A friend’ ಆಯ್ಕೆ ಮಾಡಿ ಅವರ ಹೆಸರನ್ನು ಆಯ್ಕೆ ಮಾಡಬೇಕು. ಕೊನೆಗೆ ‘submit’ ಕೊಡಬೇಕು.
- ಒಂದು ನಿಮಿಷ ಸಮಯ ಕೊಟ್ಟು ಇಂತಹ ನಕಲಿ ಖಾತೇದಾರನ್ನು ರಿಪೋರ್ಟ್ ಮಾಡಿ. ಇದರಿಂದ ಅದೆಷ್ಟೋ ಅನಾಹುತ ಆಗುವುದನ್ನು ತಪ್ಪಿಸಬಹುದು ಹಾಗೂ ಇಂಟರ್ನೆಟ್ ನ ಬದ್ರತೆಗೆ ಇದು ನಿಮ್ಮ ಕರ್ತವ್ಯ ಕೂಡ ಹೌದು.
ಪೊಲೀಸ್ ಗೆ ದೂರು ಕೊಟ್ಟರೆ ಏನಾದರೂ ಪ್ರಯೋಜನ ಇದೆಯಾ?
ನಾವು ಇದರ ಬಗ್ಗೆ ಹಲವರನ್ನು ವಿಚಾರಿಸಿದಾಗ ಓಬ್ಬೊಬ್ಬರಿಂದ ಸಿಕ್ಕ ಉತ್ತರ ಇದು.
- ಯಾರೋ ಒಬ್ಬರು ಪ್ರಭಾವಿ ವ್ಯಕ್ತಿಯ ಹೆಸರಲ್ಲಿ ನಕಲಿ ಖಾತೆ ಮಾಡಿದ್ದಾರೆ. ನಾವು ಅವರನ್ನು ಪೊಲೀಸ್ ಗೆ ದೂರು ನೀಡಿದ್ದೀರ ಎಂದು ಕೇಳಿದಾಗ, ಅವರು ಹೇಳಿದ್ದು ಹೇಗೆ ‘ನಮ್ಮ ಪರಿಚಯಸ್ತ ಪೊಲೀಸ್ ವರಿಷ್ಟರಿಗೆ ಈ ರೀತಿ ಆಗಿದೆ ಅಂದು ತಿಳಿಸಿದೆ (ಅಫೀಷಿಯಲ್ ಆಗಿ ದೂರು ಬರೆದು ಕೊಟ್ಟಿಲ್ಲ,), ಕೆಲವು ದಿನದ ನಂತರ ಆತನನ್ನು ಪತ್ತೆ ಮಾಡಿ ಬಂಧಿಸಿದರು’
- ಇನ್ನೊಬ್ಬರು ಹೇಳಿದ್ದು ಹೇಗೆ ‘ನಕಲಿ ಖಾತೆ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಅವರಿಂದ ಏನೂ ಉತ್ತರ ಬಂದಿಲ್ಲ, ಮತ್ತೆ ಹೋಗಿ ಕೇಳಿದರೆ ಒಂದು ಕಂಪ್ಲಯಿಂಟ್ ಬರೆದು ಕೊಡಿ ಎಂದರು’
- ನಾವು ಪೊಲೀಸ್ ವರಿಷ್ಟರೊಬ್ಬರನ್ನು ಕೇಳಿದಾಗ ಎಫ್ಐಆರ್ ಫೈಲ್ ಮಾಡಿ ತನಿಖೆ ಮಾಡುತ್ತಿದ್ದೇವೆ ಎಂದರು.
ಹಾಗಾದರೆ ಅವರನ್ನು ಪತ್ತೆ ಮಾಡೋದು ಹೇಗೆ?
ನಕಲಿ ಖಾತೇದಾರರು ಹಣ ಕೇಳಲು ಕಳುಹಿಸುವ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ. ಇಲ್ಲದಿದ್ದರೆ ಯಾವುದೇ ಪಾವತಿ ಅಪ್ಲಿಕೇಶನ್ಗಳು ಕಾರ್ಯನಿರ್ವಹಿಸುವುದಿಲ್ಲ, ಇದರರ್ಥ ಬ್ಯಾಂಕ್ ಖಾತೆ ತೆರೆಯಲು ಕೊಟ್ಟ ಐಡಿ ಪ್ರೂಫ್ ಅವರನ್ನು ಪತ್ತೆ ಮಾಡಿ ಹಿಡಿಯಬಹುದು.
ಮುಂಜಾಗ್ರತೆ ಕ್ರಮ ಇನ್ನೂ?
- ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಿ.
- ಸಿಕ್ಕ ಸಿಕ್ಕ ಅಪರೀಚಿತರ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಗೆ ಕೊಡಬೇಡಿ.
- ನಿಮ್ಮ ಖಾತೆಯಲ್ಲಿರುವ ಯಾರಾದರು ಫ್ರೆಂಡ್ ಪ್ರೊಫೈಲ್ ಹ್ಯಾಕ್ ಆಗಿದೆ ಎಂದು ಗೊತ್ತಾದ ತಕ್ಷಣ ಅವರನ್ನು ಪ್ರೊಫೈಲ್ ಬ್ಲಾಕ್ ಮಾಡಿ.