ಏನಿದು ‘ಕ್ಲಬ್ ಹೌಸ್’ ? ಇಲ್ಲಿದೆ ಈ ಆ್ಯಪ್ ನ ಸಂಪೂರ್ಣ ವಿವರ.

ಇತ್ತೀಚಿನ ದಿನಗಳಲ್ಲಿ ಒಂದು ರೀತಿ ಸಂಚಲನ ಆಪ್ ಎಂದರೆ ‘ಕ್ಲಬ್ ಹೌಸ್’. ಕ್ಲಬ್‌ಹೌಸ್, ಧ್ವನಿ-ಕೇಂದ್ರಿತ ಸಾಮಾಜಿಕ ಮಾಧ್ಯಮ ವೇದಿಕೆ, ಏಪ್ರಿಲ್ 2020ರಲ್ಲಿ ಶುರುವಾದ ಈ ಆ್ಯಪ್ ಆಲ್ಫಾ ಎಕ್ಸ್‌ಪ್ಲೋರೇಶನ್ ಕೊ.  ಎಂಬುವರು ಅಭಿವೃದ್ಧಿಗೊಳಿಸಿದ್ದಾರೆ. ಆಂಡ್ರಾಯ್ಡ್ ಮತ್ತು ಐ ಓ ಎಸ್ ಬಳಕೆದಾರರು ಬಳಿಸಬಹುದಾದ ಈ ಆ್ಯಪ್ ನಲ್ಲಿ ನಮ್ಮ ಧ್ವನಿಯ ಮೂಲಕ ಸಾವಿರಾರು ಜನರೊಂದಿಗೆ ಸಂಪರ್ಕಿಸಬಹುದು. ಈ ವಿವಿಧವಾದ ಆಡಿಯೋ ಮಾತ್ರ ಅಪ್ಲಿಕೇಷನ್ನಿಂದ ಯಾವ ವಿಷಯದ ಬಗ್ಗೆಯಾದರೂ ನೇರ ಚರ್ಚೆ ಮಾಡಬಹುದು. ಈ ಆ್ಯಪ್ ನಲ್ಲಿ ಟೆಕ್ಸ್ಟ್ ಮೆಸೇಜ್ ಮಾಡುವ ಆಯ್ಕೆ ಇರುವುದಿಲ್ಲ, ಏನೇ ಇದ್ದರೂ ಮಾತಿನ ಮೂಲಕ ಸಂಪರ್ಕಿಸಬೇಕು.

ಕ್ಲಬ್ ಹೌಸ್ ಕಾರ್ಯ ನಿರ್ವಹಣೆ ಹೇಗೆ?

  1. ‘ಕ್ಲಬ್ ಹೌಸ್’ ಆಪ್ ಡೌನ್ಲೋಡ್ ಮಾಡಿದ ನಂತರ, ನೋಂದಣಿ ಸಮಯದಲ್ಲಿ ಕೆಲವು ಮೂಲಭೂತ ಮಾಹಿತಿಯನ್ನು ನೀಡಬೇಕು. ಅಪ್ಲಿಕೇಶನ್ ನಿಮಗೆ ಸೂಚಿಸುವ ವಿಷಯವನ್ನು ಆಯ್ಕೆ ಗಾಗಿ ಸಹಾಯ ಮಾಡಲು ನೀವು ಅಲ್ಲಿ ಕಂಡುವರುವ ಪಟ್ಟಿಯಿಂದ ನಿಮ್ಮ ಆಸಕ್ತಿಗಳನ್ನು ಆಯ್ಕೆ ಮಾಡಬಹುದು.
  2. ನಿಮ್ಮ ವಿಷಯದ ಆಯ್ಕೆ ಹಾಗೂ ಪ್ರೊಫೈಲ್ ಮಾಹಿತಿ ಪೂರ್ಣಗೊಳಿಸಿದ ನಂತರ, ಕ್ಲಬ್‌ಹೌಸ್‌ನ ಮುಖಪುಟ ಬನ್ನಿ. ಅಲ್ಲಿ ನೀವು ಆಯ್ಕೆ ಮಾಡಿದ ಆಸಕ್ತಿಗಳ ವಿಷಯದಲ್ಲಿ ಕ್ಲಬ್ ಗಳು ಕಂಡುಬರುವುದು. ನಿಮಗೆ ಬೇಕಿರುವ ವಿಷಯದ ಕ್ಲಬ್ ಹುಡುಕಲು ಭೂತಗನ್ನಡಿ ಐಕನ್ ಒತ್ತಿ ಹುಡುಕಬಹುದು. ಕ್ಲಬ್ ಸೇರಲು ಫಲೋ ಬಟನ್ ಒತ್ತಿದರೆ ಸಾಕು. ನಂತರ ಆ ರೂಂ ನಲ್ಲಿ ಏನೇ ಚರ್ಚೆ ನೆಡೆದರೂ ನಿಮಗೆ ಅಧಿಸೂಚನೆ ಬರುವುದು.
  3. ನಿಮಗೆ ಯಾವುದಾದರೂ ಗುಂಪು ಇಷ್ಟವಾದರೆ ಸೇರಬಹುದು. ಜೂಮ್ ನಂತೆ ಪ್ರತಿ ಗುಂಪಿಗೆ ಪ್ರತ್ಯೇಕ ಲಿಂಕ್ ಕೂಡ ಇರುವುದು. ನೀವು ಮಾತನಾಡುವ ಅವಕಾಶವೂ ಇರುವುದು. ‘ಹ್ಯಾಂಡ್ ರೈಸ್ ‘ ಎಂಬುವ ಆಯ್ಕೆಯ ಮೇಲೆ ಪ್ರೆಸ್ ಮಾಡಿದರೆ ಮೇಲಿರುವ ಮಾತುಗಾರರು ನಿಮ್ಮನ್ನು ಕರೆದುಕೊಳ್ಳತ್ತಾರೆ. ನಿಮಗೆ ಮಾತನಾಡುವ ಆಸಕ್ತಿ ಇಲ್ಲದಿದ್ದರೆ ನೀವು ಪ್ರೇಕ್ಷಕರಾಗಿ ಆ ಚರ್ಚೆ ಇಷ್ಟವಾದರೆ ಕುಳಿತು ಕೇಳಬಹುದು. ಯಾವಾಗ ಬೇಕಾದರು ‘Leave Quietly ಬಟನ್ ಒತ್ತಿ ನೀವು ನಿರ್ಗಮಿಸಬಹುದು.
  4. ಮಾತುಗಾರರಿಗೆ ಹೇಳಿ ಮಾಡಿಸಿರುವ ಈ ಆ್ಯಪ್ ಅಲ್ಲಿ ನಿಮ್ಮದೇ ಕ್ಲಬ್ ಮಾಡಿಕೊಂಡು ನಿಮ್ಮ ಸ್ನೇಹಿತರನ್ನು ಆಹ್ವಾನಿಸಿ ಮಾತಾಡಬಹುದು. ಸಾಮಾಜಿಕ ವಿಷ್ಯದ ಚರ್ಚೆ, ಹಾಡುಗಾರರು , ಮಿಮಿಕ್ರಿ ಮಾಡುವವರು , ಸಂಗೀತ ವಾದ್ಯ ನುಡಿಸುವವರು ಈ ಆ್ಯಪ್ ನ ಮೂಲಕ ತಮ್ಮ ಪ್ರತಿಭೆ ಪ್ರದರ್ಶನ ಮಾಡಬಹುದು. ಜಗತ್ತಿನ ಯಾವುದೇ ಮೂಲೆಯಲ್ಲಿದ್ಧರು ಅವರೊಂದಿಗೆ ಸಂಪರ್ಕಿಸಿ ನಿಮ್ಮ ಹವ್ಯಾಸಗಳನ್ನು ಹಂಚಿಕೊಳ್ಳಬಹುದು.
  5. ಸಮಯ ಕಳೆಯುವರಿಗು ಈ ಆ್ಯಪ್ ದಾರಿ ಮಾಡಿಕೊಳ್ಳುತ್ತದೆ. ಇದರ ಹಲವಾರು ಆಟಗಳನ್ನು ಆಡಬಹುದು. ಹಾಡುಗಳು, ಜನಪ್ರಿಯ ವ್ಯಕ್ತಿಗಳ ಮಾತುಗಳು ಕೇಳಬಹುದು. ಉಳಿದ ಸೋಶಿಯಲ್ ಮೀಡಿಯಾ ಆ್ಯಪ್ ಗಳ ರೀತಿಯಲ್ಲಿ ಇಲ್ಲಿಯೂ ನಿಮ್ಮ ಫಾಲೋವರ್ಸ್ ಹೆಚ್ಚು ಮಾಡಿಕೊಳ್ಳಬಹುದು. ಮಾತುಗಾರರು ಈ ಆ್ಯಪ್ ನಲ್ಲಿ ನಿಮ್ಮ ಮಾತಿನ ಮೂಲಕ ಜನರನ್ನು ರಂಜಿಸಿದರೆ ಜನಪ್ರಿಯ ಮಾತುಗಾರನಾಗಿ ಗುರುತಿಸಿಕೊಳ್ಳಬಹುದು.
  6. ಒಂದೇ ಆಸಕ್ತಿಯುಳ್ಳವರು ನಿಮಗೆ ಈ ಆ್ಯಪ್ ನ ಮೂಲಕ ಸಿಗುತ್ತಾರೆ. ಇದರಿಂದ ನಿಮ್ಮ ಬ್ರಾಂಡ್ ಅನ್ನು ಹೊಸ ಜನಕ್ಕೆ ಪರಿಚಯ ಮಾಡಬಹುದು. ಕೆಲಸವಿರದವರಿಗೆ ಕೆಲಸ ಸಿಗುವ ಗುಂಪುಗಳು ಇರುತ್ತದೆ. ಈ ಆ್ಯಪ್ ಅನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದರೆ ಸಾಕಷ್ಟು ಹೆಸರು ಮಾಡುವ ಸಾದ್ಯತೆಗಳು ಕಂಡುಬರುತ್ತಿದೆ.
  7. ಈ ಲೇಖನ ನಿಮಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ! ದಯವಿಟ್ಟು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.  ಇದಕ್ಕೆ ಸಂಬಂಧಿಸಿದ ಯಾವುದೇ ಸಂದೇಹಗಳನ್ನು ನೀವು ಹೊಂದಿದ್ದರೆ, ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.
Related:   ಟೆಲಿಗ್ರಾಂ ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಹೇಗೆ ಮರೆಮಾಡುವುದು ?

 

 

Leave a Reply

Your email address will not be published. Required fields are marked *

error: Content is protected !!