ಫೇಸ್ಬುಕ್ ಎರಡು-ಅಂಶದ ದೃಢೀಕರಣ ಆಯ್ಕೆಯನ್ನು ಆನ್ ಮಾಡುವುದು ಹೇಗೆ ?

ನಿಮ್ಮ ಫೇಸ್ಬುಕ್ ಖಾತೆಯ ಬದ್ರತೆಗೊಳಿಸುವುದು ನಿಮ್ಮ ಮೊದಲ ಆದ್ಯತೆ ಆಗಿರಬೇಕು. ಇದಕ್ಕೆ ಮಾಡಬೇಕಾದ ಮೊದಲ ಕೆಲಸ ಎರಡುಅಂಶದ ದೃಢೀಕರಣ ಆಯ್ಕೆಯನ್ನು ಆನ್ ಮಾಡುವುದು (Two-Factor Authentication). ಇದು ನಿಮ್ಮ ಫೇಸ್ಬುಕ್ ಖಾತೆಯ ಬದ್ರತೆ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ.

ಎರಡುಅಂಶದ ದೃಢೀಕರಣ ಅಂದರೆ?

2-ಹಂತದ ದೃಢೀಕರಣ ಆಯ್ಕೆಯೆಂದರೆ ಲಾಗಿನ್ ಆದ ಕೂಡಲೇ ನೀವು ಲಿಂಕ್ ಮಾಡಿದ ಮೊಬೈಲ್ ನಂಬರ್ ಗೆ ಓಟಿಪಿ ರವಾನೆಯಾಗುವುದು, ನೀವು ಆ ಒಟಿಪಿಯನ್ನು ನಮೂದಿಸಿದ ನಂತರ ಖಾತೆಗೆ ಲಾಗಿನ್ ಆಗುವುದು. ಇದರಿಂದ ಬೇರೆಯವರ ಬಳಿ ನಿಮ್ಮ ಪಾಸ್ವರ್ಡ್ ಇದ್ದರೂ ಸಹ ಅವರು ನಿಮ್ಮ ಫೇಸ್ಬುಕ್ ಖಾತೆಗೆ ಲಾಗಿನ್ ಆಗಲು ಸಾಧ್ಯವಿಲ್ಲ.

ಎರಡುಅಂಶದ ದೃಢೀಕರಣ ಆನ್ ಮಾಡುವುದು ಹೇಗೆ?

  1. ಎರಡು-ಅಂಶದ ದೃಢೀಕರಣ ಆಯ್ಕೆ ಆನ್ ಮಾಡಲು ನಿಮ್ಮ ಫೇಸ್ಬುಕ್ ಖಾತೆಯ ಸೆಟ್ಟಿಂಗ್ಗಳು ಮತ್ತು ಗೌಪ್ಯತೆ (settings and privacy) ಆಯ್ಕೆ ಅಡಿ ಸೆಟಿಂಗ್ಸ್ ಆಯ್ಕೆಗೆ ಹೋದರೆ ಅಲ್ಲಿ ಭದ್ರತೆ ಮತ್ತು ಲಾಗಿನ್ ಎಂಬ ಆಯ್ಕೆ ಅಡಿ ಎರಡುಅಂಶದ ದೃಢೀಕರಣ ಆಯ್ಕೆ ಮಾಡಿ.
  2. ಎರಡುಅಂಶದ ದೃಢೀಕರಣ ಆಯ್ಕೆಯಲ್ಲಿ ಪತ್ಯ ಸಂದೇಶ (SMS) ಆನ್ ಮಾಡಿ. ಅದು ನೀವು ಲಿಂಕ್ ಮಾಡಿರುವ ಮೊಬೈಲ್ ಸಂಖೆ ತೋರಿಸುತ್ತದೆ ಅಥವಾ ಹೊಸ ನಂಬರ್ ಕೊಡ ನಮೂದಿಸಬಹುದು. ನೀವು ನಮೂದಿಸಿದ ಮೊಬೈಲ್ ಸಂಖೆಗೆ ಓಟಪಿ ಬರುವುದು.

ಇದರ ಜೊತೆಗೆ, ನಿಮ್ಮ ಖಾತೆ ಯಾವ ಸ್ಥಳಗಳಿಂದ ಹಾಗೂ ಯಾವ ಸಾಧನದಗಳಲ್ಲಿ (Devices) ಮೊಬೈಲ್ ಅಥವಾ ಕಂಪ್ಯೂಟರ್ ಅಲ್ಲಿ ಲಾಗಿನ್ ಮಾಡಲಾಗಿದೆ ಎಂಬ ಮಾಹಿತಿಯನ್ನು ನೋಡಲು ಅಧಿಕೃತ ಲಾಗಿನ್ ಗಳು  ಎಂಬ ಆಯ್ಕೆ ಅಡಿ ತೋರಿಸುತ್ತದೆ.

ಇದರಲ್ಲಿ ನಿಮ್ಮ ನಿಖರ ಸ್ಥ ತೋರಿಸಿವುದಿಲ್ಲ, ಯಾವಾಗಲೂ ನಿಮ್ಮ ನೆಟ್ವರ್ಕ್ ಅಥವಾ broadbandನ ಮೂಲ ಸ್ಥಳ ತೋರಿಸುತ್ತದೆ, ಇದರಲ್ಲಿ ಗೊಂದಲ ಬೇಡ. ಇರುವ ಆಯ್ಕೆಯಲ್ಲಿ ನಿಮಗೆ ಅನುಮಾನಸ್ಪದ ಅನಿಸಿದರೆ X ಒತ್ತಬಹುದು.

Related:   ಇನ್‌ಸ್ಟಾಗ್ರಾಮ್ ನಲ್ಲಿ ಮರೆಯಾಗುವ ಫೋಟೋ / ವಿಡಿಯೋಗಳನ್ನು ಕಳುಹಿಸುವುದು ಹೇಗೆ?

Leave a Reply

Your email address will not be published. Required fields are marked *

error: Content is protected !!