ಕ್ಲಬ್‌ಹೌಸ್ ಖಾತೆಯನ್ನು ಹಾಗೂ ಡಾಟಾ ಅಳಿಸುವುದು ಹೇಗೆ?

ಈ ಲೇಖನದಲ್ಲಿ ನಾವು ನಿಮಗೆ ನಿಮ್ಮ ಫೋನಿನಲ್ಲಿ ಕ್ಲಬ್ ಹೌಸ್ ಖಾತೆಯನ್ನು ಅಳಿಸುವುದು ಅಥವಾ ನಿಷ್ಕ್ರಿಯಗೊಳಿಸುವ ವಿಧಾನವನ್ನು ತಿಳಿಸುತ್ತೇವೆ.

ಈ ಕ್ಲಬ್‌ಹೌಸ್ ಖಾತೆ ನಿಮಗೆ ಬೇಡವಾದರೆ, ಹಂತ ಹಂತವಾಗಿ ಅಳಿಸುವ ದಾರಿ ಈ ಲೇಖನದಲ್ಲಿ ಹೇಳುತ್ತೇವೆ ಹಾಗೂ ಶಾಶ್ವತವಾಗಿ ನಿಮ್ಮ ಡೇಟಾ ಅಳಿಸುವ ವಿಧಾನ ನಿಮ್ಮ ಮುಂದೆ ಇಡುತ್ತೇವೆ.

ಕ್ಲಬ್ಹೌಸ್ ಖಾತೆಯನ್ನು ಅಳಿಸಲು ಮಾಡಬೇಕಾದ ಕ್ರಮಗಳು :

ನಿಮ್ಮ ಬಳಿ ಆಂಡ್ರೋಯ್ಡ್ ಅಥವಾ ಐ ಒ ಎಸ್ ಯಾವ ಫೋನ್ ಇದ್ದರೂ ಕ್ಲಬ್ ಹೌಸ್ ಖಾತೆ ಅಳಿಸುವ ವಿಧಾನ ಒಂದೇ ಆಗಿರುತ್ತದೆ. ಆಂಡ್ರಾಯ್ಡ್ ಫೋನಿನಲ್ಲಿ ನಾವು ಹಂತ ಹಂತವಾಗಿ ಈ ಕೆಳಗಿನ ಲೇಖನದಲ್ಲಿ ತೋರಿಸುತ್ತೇವೆ.

  1. ಮೊದಲು ಕ್ಲಬ್‌ಹೌಸ್ ಆ್ಯಪ್ ಅನ್ನು ತೆಗೆದು ಮೇಲೆ ಬಲಭಾಗದಲ್ಲಿ ನಿಮ್ಮ ಪ್ರೊಫೈಲ್ ಲೋಗೋ ನ ಮೇಲೆ ಒತ್ತಿರಿ.  ಪ್ರೊಫೈಲ್ ಪುಟದಲ್ಲಿ ಮೇಲಿನ ಬಲಭಾಗದಲ್ಲಿ ಗೇರ್/ಸೆಟ್ಟಿಂಗ್ ಲೋಗೋ ಒಟ್ಟಿರಿ.
  2. ಸೆಟ್ಟಿಂಗ್ ಪುಟ ದೊರಕಿದ ನಂತರ, “ ಅಕೌಂಟ್ ” ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ. ನಿಮ್ಮ ಖಾತೆಯನ್ನು ಅಳಿಸಲು “ ಡಿಯಾಕ್ಟಿವೆಟ್ ಅಕೌಂಟ್“  ಬಟನ್ ಮೇಲೆ ಒತ್ತಿರಿ.
  3. ಡಿಯಾಕ್ಟಿವೆಟ್ ಅಕೌಂಟ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಪುಟದ ಮೇಲೆ ಕ್ಲಬ್ ಹೌಸ್ ಖಾತೆ ಅಳಿಸುವುದಕ್ಕೆ ಒಂದು ಎಚ್ಚರಿಕೆ ಪುಟವೊಂದು ಕಂಡು ಬರುತ್ತದೆ. ಎಚ್ಚರಿಕೆಯ ಪುಟವನ್ನು ನೀವು ಒಂದು ಬಾರಿ ತಿಳಿದು ನಂತರ “ ಐ ಅಂಡರ್ಸ್ಟ್ಯಾಂಡ್.  ಡಿಯಾಕ್ಟಿವೆಟ್ ಅಕೌಂಟ್” ಎಂಬ ಕೆಂಪು ಬಟನ್ ಮೇಲ್ ಕ್ಲಿಕ್ ಮಾಡಿರಿ.
  4. ನಿಮ್ಮ ಕ್ಲಬ್‌ಹೌಸ್ ಖಾತೆಯನ್ನು ಒಮ್ಮೆ ಅಳಿಸಿದ ನಂತರ, ಆ್ಯಪ್ ನಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ಅಕೌಂಟ್ ಕಂಡುಬರುವುದಿಲ್ಲ.  ಅದನ್ನು ಮತೊಮ್ಮೆ ಸಕ್ರಿಯಗೊಳಿಸಲು ನೀವು 30 ದಿನದ ಒಳಗೆ ಮತ್ತೆ  ಆ್ಯಪ್  ಇನ್ಸ್ಟಾಲ್ ಮಾಡಿ ಲಾಗ್ ಇನ್ ಮಾಡಬೇಕು ಎಂದು ಆ್ಯಪ್  ಸೂಚಿಸುತ್ತದೆ.   ನೀವು ಹಾಗೆ ಮಾಡಿದರೆ ಮತೊಮ್ಮೆ ನಿಮ್ಮ ಖಾತೆ ತೆರೆಯುತ್ತದೆ ಮರಳಿ ಮುಂಚಿನ ಸ್ಥಿತಿಗೆ ಬರುತ್ತದೆ. ನಿಮ್ಮ ಸ್ನೇಹಿತರು ನಿಮ್ಮ ಖಾತೆಯನ್ನು ನೋಡಬಹುದು. ಒಂದು ವೇಳೆ ನೀವು ಆ 30 ದಿನಗಳಲ್ಲಿ  ಮತ್ತೆ ಲಾಗ್ ಇನ್ ಮಾಡದಿದ್ದರೆ, ಕ್ಲಬ್‌ಹೌಸ್  ಆ್ಯಪ್ ನಿಮ್ಮ ಖಾತೆಯನ್ನು  ಶಾಶ್ವತವಾಗಿ ಅಳಿಸುತ್ತದೆ.

ಕ್ಲಬ್ಹೌಸ್ ಡೇಟಾವನ್ನು ಹೇಗೆ ಅಳಿಸುವುದು

ಮೇಲೆ ತಿಳಿಸಿರುವ ಮಾಹಿತಿಯಲ್ಲಿ ನಿಮ್ಮ ಕ್ಲಬ್ ಹೌಸ್ ಖಾತೆಯನ್ನು ಆಲಿಸುವುದು ಹೇಗೆ ಎಂದು ತಿಳಿಸಿದೆವು. ಆದರೆ ಕ್ಲಬ್ ಹೌಸ್ ಕಂಪನಿಯು ನಿಮ್ಮ ಡೇಟಾವನ್ನು ಪಡೆದು ಉಳಿಸಿಕೊಳ್ಳುತ್ತದೆ. ಟ್ವಿಟರ್ , ಫೇಸ್ಬುಕ್ ಮತ್ತು ಉಳಿದ ಸಾಮಾಜಿಕ ಮೀಡಿಯಾ ಆ್ಯಪ್ ಕಂಪನಿ ಗಳು ಖಾತೆಯ ಡೇಟಾವನ್ನು ವೆಬ್ಸೈಟ್ ನಲ್ಲಿ ಅಳಿಸುವ ಅವಕಾಶ ನೀಡುತ್ತದೆ ಆದರೆ ಕ್ಲಬ್‌ಹೌಸ್‌ ನಲ್ಲಿ ಅಂತಹ ಯಾವುದೇ ಅವಕಾಶವಿಲ್ಲ. ನಿಮ್ಮ ಡೇಟಾವನ್ನು ಅಳಿಸುವ ಏಕೈಕ ದಾರಿ ಎಂದರೆ ಅದು  ಕ್ಲಬ್ ಹೌಸ್ ಸಪೋರ್ಟ್ ಅನ್ನು ವಿನಂತಿಸಕೊಳ್ಳಬಹುದು.

Related:   ಫೇಸ್ಬುಕ್ ಇನ್ಸ್ಟಾಗ್ರಾಂ ನಲ್ಲಿ ಲೈಕ್ ಹಾಗೂ ರಿಯಾಕ್ಷನ್ ಸಂಖೆ ಮರೆಮಾಡುವುದು ಹೇಗೆ ?

Leave a Reply

Your email address will not be published. Required fields are marked *

error: Content is protected !!